ಸ್ಚಿಪೋಲ್: ವಿಮಾನದ ಸ್ಪಿನ್ನಿಂಗ್ ಟರ್ಬೈನ್ ಬ್ಲೇಡ್ಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಆಂಸ್ಟರ್ಡ್ಯಾಮ್ನ ಸ್ಚಿಪೋಲ್ನಲ್ಲಿ ನಡೆದಿದೆ.
Ad
ಡಚ್ ಏರ್ಲೈನ್ ಕೆಎಲ್ಎಂ ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿದೆ. ಆಂಸ್ಟರ್ಡ್ಯಾಮ್ನ ಶಿಪೋಲ್ ವಿಮಾನ ನಿಲ್ದಾಣದಿಂದ ಡೆನ್ಮಾರ್ಕ್ನ ಬಿಲ್ಲುಂಡೆಗೆ ಹೊರಟಿದ್ದ ವಿಮಾನದ ಟರ್ಬೈನ್ ಬ್ಲೇಡ್ಗೆ ವ್ಯಕ್ತಿ ಸಿಲುಕಿದ್ದಾನೆ. ಇನ್ನೇನು ಹಾರಾಡಲು ರೆಡಿಯಾಗಿದ್ದ ವಿಮಾನದ ಬ್ಲೇಡ್ಗೆ ಸಿಲುಕಿ ಬಲಿಯಾಗಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
Ad
ಬುಧವಾರದಂದು ನಡೆದ ಘಟನೆ ಇದಾಗಿದೆ. ಕೆಎಲ್1341 ವಿಮಾನ ಬಿಲ್ಲುಂಡ್ಗೆ ಹಾರಲು ತಯಾರಿ ಸಡೆಸುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಡಚ್ ಏರ್ಲೈನ್ ತಿಳಿಸಿದೆ. ಈ ದುರ್ಘಟನೆ ಸಂಭವಿಸಿದ ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.
Ad
Ad