Bengaluru 24°C
Ad

ನಟ ಸನ್ನಿ ಡಿಯೋಲ್​ ವಿರುದ್ಧ ಮೋಸ, ಸುಲಿಗೆ, ಫೋರ್ಜರಿ ಆರೋಪ

ಬಾಲಿವುಡ್​ ನಟ ಸನ್ನಿ ಡಿಯೋಲ್​  ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್​ ಮೋಸ ಮಾಡಿದ್ದಾರೆ ಎನ್ನಲಾಗಿದೆ. 

ಬಾಲಿವುಡ್​ ನಟ ಸನ್ನಿ ಡಿಯೋಲ್​  ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್​ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಬಾಲಿವುಡ್​ ನಿರ್ಮಾಪಕ ಸೌರವ್​ ಗುಪ್ತ ಅವರು ಸುದ್ದಿಗೋಷ್ಠಿ ನಡೆಸಿ  ವಿಚಾರಗಳನ್ನು ಬಯಲು ಮಾಡಿದ್ದಾರೆ.

ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದ ಸನ್ನಿ ಡಿಯೋಲ್​ ಮೋಸ  ಮಾಡಿದ್ದಾರೆ ಎನ್ನಲಾಗಿದೆ. ರಿಯಲ್​ ಎಸ್ಟೇಟ್​ ಕ್ಷೇತ್ರದಲ್ಲಿ ಪಳಗಿರುವ ಸೌರವ್​ ಗುಪ್ತಾ ಅವರು ಸಿನಿಮಾ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ.

2016ರಲ್ಲಿಯೇ ಸನ್ನಿ ಡಿಯೋಲ್​ ಅವರಿಗೆ ಒಂದು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸೌರವ್​ ಗುಪ್ತಾ ಅವರು 1 ಕೋಟಿ ರೂಪಾಯಿ ಅಡ್ವಾನ್ಸ್​ ನೀಡಿದ್ದರು. ಆದರೆ ಈ ಸಿನಿಮಾ ಈವರೆಗೆ ಸೆಟ್ಟೇರಿಲ್ಲ. ‘ನಾವು ಅವರಿಗೆ 1 ಕೋಟಿ ರೂಪಾಯಿ ಅಡ್ವಾನ್ಸ್​ ನೀಡಿದ್ದೆವು. ಆದರೆ ನಮ್ಮ ಸಿನಿಮಾ ಮಾಡುವ ಬದಲು ಅವರು ಬೇರೆ ಸಿನಿಮಾದಲ್ಲಿ ನಟಿಸಿದರು. ಅಲ್ಲದೇ ಪದೇ ಪದೇ ನನ್ನಿಂದ ಅವರು ಹೆಚ್ಚು ಹಣ ಕೇಳಿದರು. ಈತನಕ ನನ್ನಿಂದ 2.55 ಕೋಟಿ ರೂಪಾಯಿ ಹಣ ಸನ್ನಿ ಡಿಯೋಲ್​ ಅವರ ಖಾತೆಗೆ ಹೋಗಿದೆ’ ಎಂದು ಸೌರವ್​ ಗುಪ್ತಾ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಸನ್ನಿ ಡಿಯೋಲ್​ ಮೇಲೆ ಫೋರ್ಜರಿ ಆರೋಪ ಕೂಡ ಎದುರಾಗಿದೆ. ‘ನಾವು ಒಪ್ಪಂದ ಪತ್ರ ಓದಿದಾಗ ಅವರು ಫೋರ್ಜರಿ ಮಾಡಿರುವುದು ತಿಳಿಯಿತು. 4 ಕೋಟಿ ರೂಪಾಯಿ ಸಂಭಾವನೆ ಬದಲಿಗೆ 8 ಕೋಟಿ ರೂಪಾಯಿ ಎಂದು ತಿದ್ದಿದ್ದರು’ ಎಂದಿದ್ದಾರೆ.

‘ರಾಮ ಜನ್ಮಭೂಮಿ’ ಎಂಬ ಸಿನಿಮಾದಲ್ಲಿ ನಟಿಸಲು ಅವರು 5 ಕೋಟಿ ರೂಪಾಯಿ ಸಂಭಾವನೆಗೆ ಸಹಿ ಮಾಡಿದ್ದರು. ಆದರೆ ‘ಗದರ್​ 2’ ಸಿನಿಮಾ ಹಿಟ್​ ಆದ ಬಳಿಕ ಅದೇ ‘ರಾಮ ಜನ್ಮಭೂಮಿ’ ಸಿನಿಮಾಗೆ 25 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡಲು ಶುರು ಮಾಡಿದರು ಎನ್ನಲಾಗಿದೆ.

ಮತ್ತೋರ್ವ ನಿರ್ಮಾಪಕ ಸುನೀಲ್​ ದರ್ಶನ್​ ಕೂಡ ತಮಗೆ ಸನ್ನಿ ಡಿಯೋಲ್​ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ.

Ad
Ad
Nk Channel Final 21 09 2023
Ad