Bengaluru 23°C
Ad

ʼಮಾ ತುಜೇ ಸಲಾಮ್ʼ ಹಾಡಿಗೆ ನೃತ್ಯ ಮಾಡುತ್ತಾ ನಿವೃತ್ತ ಯೋಧ ಮೃತ್ಯು

ನಿವೃತ್ತ ಯೋಧರೊಬ್ಬರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಗೀತೆಗೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‌ನ ಫುತಿ ಕೋಠಿಯಲ್ಲಿನ ಯೋಗ ಕೇಂದ್ರದಲ್ಲಿ ನಡೆದಿದೆ.

ಭೋಪಾಲ್​: ನಿವೃತ್ತ ಯೋಧರೊಬ್ಬರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಗೀತೆಗೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‌ನ ಫುತಿ ಕೋಠಿಯಲ್ಲಿನ ಯೋಗ ಕೇಂದ್ರದಲ್ಲಿ ನಡೆದಿದೆ.

ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಛಾಬ್ರಾ ಅವರು ಸಡನ್ ಹಾರ್ಟ್​ ಅಟ್ಯಾಕ್​​ನಿಂದ ಸಾವನ್ನಪ್ಪಿದವರು. ಇವರು ಇಂದೋರ್‌ನ ಫುತಿ ಕೋಠಿಯ ಯೋಗ ಕೇಂದ್ರಕ್ಕೆ ಆಗಮಿಸಿ ಮಾ ತುಜೇ ಸಲಾಮ್ ಹಾಡಿಗೆ ವೇದಿಕೆ ಮೇಲೆ ತ್ರಿವರ್ಣ ಧ್ವಜ ಹಿಡಿದು ನೃತ್ಯ ಮಾಡುತ್ತಿದ್ದರು.

ಹೀಗೆ ಕೆಲ ಸಮಯ ಡ್ಯಾನ್ಸ್ ಮಾಡಿ ಅಲ್ಲಿದ್ದವರಲ್ಲಿ ದೇಶಭಕ್ತಿ ಮೂಡಿಸಿದ್ದಾರೆ. ಹಾಗೇ ಕುಣಿಯುತ್ತಿರುವಾಗ ನಿವೃತ್ತ ಯೋಧನಿಗೆ ಹಾರ್ಟ್​ ಅಟ್ಯಾಕ್​ ಕಾಣಿಸಿಕೊಂಡಿದೆ. ತಕ್ಷಣ ಅವರು ನೆಲಕ್ಕೆ ಬಿದ್ದಿದ್ದಾರೆ. ಆದರೆ ಇದೆಲ್ಲ​ ನೋಡುತ್ತಿದ್ದವರು ಡ್ಯಾನ್ಸ್​ನ ಒಂದು ಭಾಗ ಎಂದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ನಂತರ ಮೇಲಕ್ಕೆ ಏಳದೆ ಹಾಗೆ ಇದ್ದಿದ್ದಕ್ಕೆ ಅನುಮಾನ ಬಂದು ನೋಡಿದಾಗ ಇನ್ನು ಜೀವ ಇತ್ತು. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

Ad
Ad
Nk Channel Final 21 09 2023
Ad