Bengaluru 29°C
Ad

ಪ್ರೇಮಲೋಕ 2’ಬಗ್ಗೆ ಅಪ್‌ಡೇಟ್‌ ಕೊಟ್ಟ ‘ಕ್ರೇಜಿ ಸ್ಟಾರ್’

Ravichandran

ಬೆಂಗಳೂರು: ಇಂದು ರವಿಂದ್ರನ್‌ ಅವರಿಗೆ ಬರ್ತ್‌ಡೇ ಸಂಭ್ರಮ. ರವಿಚಂದ್ರನ್‌ ಮನೆಯ ಮುಂದೆ ಫ್ಯಾನ್ಸ್ ನೆರೆದಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಈ ಬಾರಿ ಅವರು ಗ್ರ್ಯಾಂಡ್ ಆಗಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಜೊತೆಗೆ ʻಪ್ರೇಮಲೋಕ 2ʼ ಸಿನಿಮಾ ಕುರಿತು ಅಪ್‌ಡೇಟ್‌ ಹಂಚಿಕೊಂಡಿದ್ದಾರೆ ರವಿಚಂದ್ರನ್‌.

‘ಪ್ರೇಮಲೋಕ 2’ ಚಿತ್ರವನ್ನು ರವಿಚಂದ್ರನ್ ಇಂದು ಅನೌನ್ಸ್ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.

ʻಪ್ರೇಮಲೋಕ-2 ಟ್ರೈಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಎಂದು ಇಂದು ಲಾಂಚ್ ಮಾಡಲಿಲ್ಲ. ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ. ನಾನು ನನ್ನ ಮಕ್ಕಳು ಮೂವರೂ ʻಪ್ರೇಮಲೋಕ 2ʼನಲ್ಲಿ ಇರ್ತೀವಿ. ʻಪ್ರೇಮಲೋಕʼ ಸಿನಿಮಾವನ್ನು ಅಂದಿನ ಕಾಲಕ್ಕೆ ಒಂದು ರೂಪಾಯಿ ಕೊಟ್ಟು ನೋಡಿದ್ರು. ಈಗ 2 ಸಾವಿರ ಕೊಟ್ಟು ನೋಡ್ತಿದ್ದಾರೆʼʼಎಂದರು.

ಒಳ್ಳೆಯ ಸಿನಿಮಾ ಮಾಡಿದ್ರೆ ಜನ ಥಿಯೇಟರ್‌ಗೆ ಬರ್ತಾರೆ. ಯಶ್ ತಿಂಗಳಿಗೊಂದು ಸಿನಿಮಾ ಮಾಡೋಕೆ ಆಗಲ್ಲ.. ಕೆಜಿಎಫ್ ಸಿನಿಮಾಗೆ ಆತ ಫೈಟ್ ಕೊಡಬೇಕು. ನಮಗೆ ಮಾರ್ಕೆಟ್ ಇಲ್ಲ. 10 ಸಿನಿಮಾ ಮಾಡೋಕೆ ನಾನು ರೆಡಿ.. ಆದರೆ ಸಾವಿರ ಕೋಟಿ ರೂ. ನಮ್ಮ ಮೇಲೆ ಹಾಕೋರೇ ಇಲ್ಲ’ಎಂದರು.

Ad
Ad
Nk Channel Final 21 09 2023
Ad