Bengaluru 23°C
Ad

ಭಕ್ತಿಯ ಪ್ರದರ್ಶನ ಬೇಕಿಲ್ಲ; ಮೋದಿ ಧ್ಯಾನಕ್ಕೆ ಖರ್ಗೆ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನಸ್ಥರಾಗಿರುವುದನ್ನು ಟೀಕಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇವರಲ್ಲಿ ಭಕ್ತಿಯಿದ್ದರೆ ಮನೆಯಲ್ಲೇ ಧ್ಯಾನ ಮಾಡಬಹುದಿತ್ತು ಎಂದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನಸ್ಥರಾಗಿರುವುದನ್ನು ಟೀಕಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇವರಲ್ಲಿ ಭಕ್ತಿಯಿದ್ದರೆ ಮನೆಯಲ್ಲೇ ಧ್ಯಾನ ಮಾಡಬಹುದಿತ್ತು ಎಂದರು.

ಮೋದಿಯ ಧ್ಯಾನದಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, ಅವರ ಜೊತೆಯಲ್ಲಿ ಭದ್ರತೆಗಾಗಿ ಪೋಲಿಸರನ್ನು ನಿಯೋಜಿಸಲಾಗಿದೆ. ಮೋದಿ ಕನ್ಯಾಕುಮಾರಿಗೆ ಹೋಗಿ ನಾಟಕ ಮಾಡುತ್ತಿದ್ದಾರೆ. ಅವರ ನಾಟಕದಿಂದ ದೇಶಕ್ಕೆ ನಷ್ಟವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದ ಜನತೆ ಮೋದಿ ನಾಯಕತ್ವವನ್ನು ಒಪ್ಪದ ನಿರ್ಧಾರಕ್ಕೆ ಬಂದಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದಂತಹ ವಿಷಯಗಳು ಜನರ ಮನಸ್ಸಿನಲ್ಲಿವೆ ಎಂದು ಖರ್ಗೆ ಹೇಳಿದರು.

Ad
Ad
Nk Channel Final 21 09 2023
Ad