Bengaluru 23°C
Ad

ನಟಿಯನ್ನು ತಳ್ಳಿದ ಬಾಲಯ್ಯ; ವಿಡಿಯೋ ವೈರಲ್ ಆಗ್ತಿದ್ದಂತೆ ನಟಿ ಅಂಜಲಿ ಟ್ವೀಟ್

Anjali

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವ ನಟಿ ಅಂಜಲಿ ಅವರನ್ನು ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರು ವೇದಿಕೆಯಲ್ಲಿ ತಳ್ಳಿದ ವಿಡಿಯೋ ವೈರಲ್ ಆಗಿತ್ತು. ಈ ಒಂದು ವರ್ತನೆಗೆ ನೆಟ್ಟಿಗರು ಹಿರಿಯ ನಟನನ್ನು ಸಾಕಷ್ಟು ಟೀಕಿಸಿದ್ದರು. ಆದರೆ ನಟಿ ಸ್ಮೈಲ್ ಕೊಟ್ಟ ಆ ಸಂದರ್ಭದವನ್ನು ನಾಜೂಕಾಗಿ ನಿಭಾಯಿಸಿದ್ದರು.

ಇದೀಗ ನಟಿ ಟ್ವಿಟರ್​ನಲ್ಲಿ ಈ ಬಗ್ಗೆ ಬರೆದಿದ್ದಾರೆ. ‘ಗ್ಯಾಂಗ್ಸ್ ಆಫ್ ಗೋದಾವರಿ’ ಕಾರ್ಯಕ್ರಮದಲ್ಲಿ ಬಾಲಕೃಷ್ಣ ನಟಿಯನ್ನು ವೇದಿಕೆಯ ಮೇಲೆ ತಳ್ಳುವ ವೈರಲ್ ವೀಡಿಯೊದ ಒಂದು ದಿನದ ನಂತರ ಅಂಜಲಿ ಟ್ವೀಟ್ ಮಾಡಿದ್ದಾರೆ.

“ಗ್ಯಾಂಗ್ಸ್ ಆಫ್ ಗೋದಾವರಿ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ನಾನು ಬಾಲಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬಾಲಕೃಷ್ಣ ಅವರು ಮತ್ತು ನಾನು ಯಾವಾಗಲೂ ಪರಸ್ಪರ ಗೌರವವನ್ನು ಉಳಿಸಿಕೊಂಡಿದ್ದೇವೆ. ನಮ್ಮ ನಡುವೆ ಒಂದು ಉತ್ತಮ ಸ್ನೇಹವಿದೆ ಎಂದು ನಾನು ತಿಳಿಸಲು ಬಯಸುತ್ತೇನೆ” ಎಂದಿದ್ದಾರೆ.

https://x.com/yoursanjali/status/1796260781551682021

ನಟಿ ಅಂಜಲಿಯನ್ನು ವೇದಿಕೆಯಲ್ಲಿಯೇ ಜೋರಾಗಿ ತಳ್ಳಿದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ಶೇರ್ ಆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇದು ಭಾರೀ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

Ad
Ad
Nk Channel Final 21 09 2023
Ad