Bengaluru 29°C
Ad

ವಿಶ್ವದ ಪ್ರಭಾವಿ ಕಂಪನಿಗಳ ಟೈಮ್ಸ್-100 ಪಟ್ಟಿಯಲ್ಲಿ ಭಾರತೀಯ ಸಂಸ್ಥೆಗಳು

Tata

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಗ್ರೂಪ್​ಗೆ ಸೇರಿದ ಸಂಸ್ಥೆಯೊಂದು ಎರಡನೇ ಬಾರಿ ಟೈಮ್ಸ್ ಮ್ಯಾಗಝಿನ್​ನ ವಿಶ್ವದ 100 ಅತಿ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

2024ರ ಈ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್, ಟಾಟಾ ಗ್ರೂಪ್ ಮತ್ತು ಸೀರಂ ಇನ್ಸ್​ಟಿಟ್ಯೂಟ್ ಸಂಸ್ಥೆಗಳು ಸ್ಥಾನ ಪಡೆದಿವೆ. ಈ ಮೊದಲು ರಿಲಾಯನ್ಸ್ ಜಿಯೋ ಈ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.

ಈ ಟೈಮ್ಸ್ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಎರಡು ಬಾರಿ ಸ್ಥಾನ ಪಡೆದ ಮೊದಲ ಸಂಸ್ಥೆ ರಿಲಾಯನ್ಸ್ ಗ್ರೂಪ್. ಐದು ವಿಭಾಗದಲ್ಲಿ ನೀಡಲಾಗಿರುವ ಈ ವರ್ಷದ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಗ್ರೂಪ್ ಸಂಸ್ಥೆಗಳು ಟೈಟಾನ್ಸ್ ಕೆಟಗರಿಯಲ್ಲಿ ಸ್ಥಾನ ಪಡೆದಿವೆ. ಸೀರಂ ಸಂಸ್ಥೆ ಇನ್ನೋವೇಟರ್ಸ್ ಕೆಟಗರಿಯಲ್ಲಿ ಸೇರ್ಪಡೆಯಾಗಿದೆ.

ಭಾರತ ಮೂಲದ ಆದಿತ್ ಮೂರ್ತಿ ಎಂಬುವವರು ಸ್ಥಾಪಿಸಿದ ಭೂಮಿತ್ರಾ (Boomitra) ಎಂಬ ಸಂಸ್ಥೆಯೂ ಕೂಡ 2024ರ ಟೈಮ್ಸ್ ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ರೈತರಿಗೆ ಕಾರ್ಬನ್ ಕ್ರೆಡಿಟ್ ಆದಾಯ ಒದಗಿಸುವಂತಹ ವಿನೂತನ ಯೋಜನೆಯನ್ನು ಈ ಭೂಮಿತ್ರಾ ರೂಪಿಸಿದೆ.

ಶಿಯೋಮಿ, ಹುವಾವೇ, ಟಿಕ್ ಟಾಕ್, ಬೈಡು ಮೊದಲಾದ ಚೀನೀ ಕಂಪನಿಗಳಿವೆ. ಮೈಕ್ರೋಸಾಫ್ಟ್, ಓಪನ್​ಎಐ, ಗೂಗಲ್, ಎಎಂಡಿ, ಸೆರಿಬ್ರಲ್ ಸಿಸ್ಟಮ್ಸ್ ಮೊದಲಾದ ಟೆಕ್ನಾಲಜಿ ಕಂಪನಿಗಳು ಟೈಮ್ಸ್ ಮ್ಯಾಗಝಿನ್ ಪಟ್ಟಿಯಲ್ಲಿವೆ.

 

 

Ad
Ad
Nk Channel Final 21 09 2023
Ad