Bengaluru 24°C
Ad

ವೃದ್ಧೆಯ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ಪ್ರಧಾನಿ ಮೋದಿ: ವೀಡಿಯೋ ವೈರಲ್‌

ಪ್ರಧಾನಿ ನರೇಂದ್ರ ಮೋದಿಯವರು  ವೃದ್ಧೆಯೊಬ್ಬರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ವೀಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿಯವರು  ವೃದ್ಧೆಯೊಬ್ಬರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ವೀಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಬುಧವಾರ ಪ್ರಧಾನಿಯವರು ಚುನಾವಣಾ ರ‍್ಯಾಲಿ ನಡೆಸಲು ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ಅಂತೆಯೇ ರ‍್ಯಾಲಿ ಬಳಿಕ ವೇದಿಕೆಯಲ್ಲಿ ವೃದ್ಧೆಯೊಬ್ಬರ ಕಾಲಿಗೆ ನಮಸ್ಕರಿಸಿದ್ದಾರೆ.

ವೀಡಿಯೋ ವೈರಲ್‌ ಬೆನ್ನಲ್ಲೇ ಆ ವೃದ್ಧೆ ಯಾರು ಎಂಬ ಪ್ರಶ್ನೆ ಮೂಡಿದ್ದು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮೋದಿಯವರು ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ಈ ವೃದ್ಧೆಯ ಹೆಸರು ಕಮಲಾ ಮಹಾರಾಣಾ. ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಇವರನ್ನು ಗುರುತಿಸಿ, ಕೆಲಸವನ್ನು ಕೊಂಡಾಡಿದ್ದರು.

ರ‍್ಯಾಲಿ ಬಳಿಕ ವೇದಿಕೆಯಲ್ಲಿ ಕಮಲಾ ಮಹಾರಾಣಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ.

Ad
Ad
Nk Channel Final 21 09 2023
Ad