Bengaluru 22°C
Ad

ನಡು ರಸ್ತೆಯಲ್ಲಿ ನಮಾಜ್ : ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕ ಭರತ್ ಶೆಟ್ಟಿ

ಮಂಗಳೂರು ನಡು ರಸ್ತೆಯಲ್ಲೇ ನಮಾಜ್ ವಿಚಾರವಾಗಿ ಸರ್ಕಾರದ ವಿರುದ್ಧ ಮಂಗಳೂರು ಶಾಸಕ ಭರತ್ ಶೆಟ್ಟಿ ಕಿಡಿಕಾರಿದ್ದಾರೆ.

ಮಂಗಳೂರು: ಮಂಗಳೂರು ನಡು ರಸ್ತೆಯಲ್ಲೇ ನಮಾಜ್ ವಿಚಾರವಾಗಿ ಸರ್ಕಾರದ ವಿರುದ್ಧ ಮಂಗಳೂರು ಶಾಸಕ ಭರತ್ ಶೆಟ್ಟಿ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ನಾಳೆ ರಸ್ತೆ ಮಧ್ಯೆ ಹನುಮಾನ್ ಚಾಲೀಸಾ ಪಠಣ ಮಾಡಿದ್ರೆ ಬಿಡ್ತೀರಾ ?. ಟ್ರಾಫಿಕ್ ಇರೋ ಜಾಗದಲ್ಲಿ ನಮಾಜ್ ಮಾಡೋದು ಸರಿನಾ ?. ಯಕ್ಷಗಾನ ಅಥವಾ ಬೇರೆ ಕಾರ್ಯಕ್ರಮವನ್ನ ನಾವು ಅನುಮತಿ ಪಡೆದು ಮಾಡುತ್ತೇವೆ. ವರ್ಷಕ್ಕೊಮ್ಮೆ ದೊಡ್ಡ ಹಬ್ಬ ಆದಾಗ ಅನುಮತಿ ಪಡೆದು ಮಾಡಲಿ. ಏಕಾಏಕಿ‌ ರಸ್ತೆಗೆ ಬಂದು ನಮಾಝ್ ಮಾಡೋದು ಸರಿಯಾ..?

ಸುಮೋಟೊ ಕೇಸ್ ವಾಪಾಸು ಪಡೆಯಲಾಗಿದೆ. ಅಧಿಕಾರಿಯನ್ನು ರಜೆ ಮೇಲೆ ಕಳಿಸಿದ್ದು ಸರಿಯಾ. ಬಿ ರಿಪೋರ್ಟ್ ಹಾಕುವ ಮೊದಲು ತನಿಖೆ ಆಗಬೇಕು. ತನಿಖೆ ಆಗದೆ ಬಿ ರಿಪೋರ್ಟ್ ಹಾಕಿದ್ದು ಸರಿನಾ. ಇದು ರಾಜಕೀಯ ಒತ್ತಡದಿಂದ ಆಗಿದೆ. ತುಷ್ಟೀಕರಣ ನೀತಿಯ ಪರಮಾವಧಿಯನ್ನು ತಲುಪಿದ್ದಾರೆ. ನಮಾಝ್ ಮಾಡುವವರ ವೋಟ್ ಎಲ್ಲಾ ನಮಗೆ ಬೀಳುತ್ತೆ ಎಂಬ ಮನಸ್ಥಿತಿ ಇದೆ.

ಪ್ರಶ್ನೆ ಮಾಡಿದ್ರು ಕೇಸ್ ಹಾಕ್ತಾರೆ. ನಾಳೆ ಮತ್ತೊಬ್ಬರು ಬಂದು ರಸ್ತೆಗೆ ಇಳಿತಾರೆ ಪ್ರಾರ್ಥನೆ ಮಾಡ್ತಾರೆ. ಯಾಕೆ ಇದಕ್ಕೆ ಅವಕಾಶ ಮಾಡಿಕೊಡಬೇಕು. ಅನುಮತಿ ಯಾಕೆ ಪಡೆಯಬೇಕೆಂಬ ಮನಸ್ಥಿತಿ ಬರುತ್ತೆ. ಬನಾನ ರಿಪಬ್ಲಿಕ್ ಗಿಂತ ಕೆಟ್ಟದಾಗಿ ಆಗ್ತಿದೆ. ಆಡಳಿತ ಸಂಪೂರ್ಣ ವೈಫಲ್ಯವಾಗಿದೆ.

ಶರಣ್ ಪಂಪುವೆಲ್ ಹಾಕಿರುವ ಪೋಸ್ಟ್ ಗೆ ನನ್ನ ಬೆಂಬಲವಿದೆ. ಅವರು ಹಾಕಿದ್ದು ಸರಿಯಾಗಿದೆ. ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡ್ತಿದ್ದಾರೆ. ಸಂವಿಧಾನ ಪ್ರಕಾರ ಯಾರು ಕೆಲಸ ಮಾಡ್ತಿಲ್ಲ. ಎಲ್ಲಾ ಕಡೆಯಲ್ಲೂ ಫಿಕ್ಸಿಂಗ್ ಆಗ್ತಿದೆ. ಇದಕ್ಕೆಲ್ಲಾ ನಾವು ಬಗ್ಗೋದಿಲ್ಲ. ಸಂಘರ್ಷದ ಮೂಲಕವೇ ನಾವು ಪಕ್ಷ ಕಟ್ಟಿದವರು. ಮುಂದೆಯೂ ಅದೇ ರೀತಿಯ ಹೋರಾಟ ಮಾಡ್ತೇವೆ. ಈ ವಿಚಾರದ ಬಗ್ಗೆ ಸದನದಲ್ಲಿಯೂ ಪ್ರಶ್ನೆ ಮಾಡ್ತೇವೆ ಎಂದು ಮಂಗಳೂರಿನಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

Ad
Ad
Nk Channel Final 21 09 2023
Ad