Bengaluru 25°C
Ad

ರಾಜ್ಯದಲ್ಲಿ ನಾಳೆಯಿಂದ 5 ದಿನಗಳ ಕಾಲ ಮದ್ಯದಂಗಡಿಗಳು ಕ್ಲೋಸ್‌‌

ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಕಾರಣ ಬೆಂಗಳೂರು ಜಿಲ್ಲಾಡಳಿತ ಜೂನ್ ಮೊದಲನೇ ವಾರದಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶ ನೀಡಿದೆ. 

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಕಾರಣ ಬೆಂಗಳೂರು ಜಿಲ್ಲಾಡಳಿತ ಜೂನ್ ಮೊದಲನೇ ವಾರದಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶ ನೀಡಿದೆ.

ಅದರಂತೆ ಜೂನ್‌ 1 ರಿಂದ ಜೂನ್‌ 6ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟಕ್ಕೆ ನಿಷೇಧವಿದೆ.

ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1 ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್ ಆಗಲಿದ್ದು, ಜೂನ್ 3 ರ ಸಂಜೆ 4 ಗಂಟೆವರೆಗೆ ಬಂದ್ ಮಾಡಬೇಕಾಗುತ್ತದೆ. ಅದೇ ರೀತಿ, ಜೂನ್ 4 ರಂದು ದೇಶದಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.

ಹೀಗಾಗಿ ಜೂನ್‌ 6ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಕಷ್ಟವಾಗಿದೆ. ಚುನಾವಣೆ ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧ ಮಾಡಿ, ಮದ್ಯ ಮಾರಾಟ ರಹಿತ ದಿನಗಳೆಂದು ಘೋಷಣೆ ಮಾಡಲಾಗಿದೆ.

Ad
Ad
Nk Channel Final 21 09 2023
Ad