Bengaluru 22°C
Ad

ವೈದ್ಯರ ನಿರ್ಲಕ್ಷ್ಯ ಗರ್ಭದಲ್ಲೇ ಮಗು ಸಾವು, ತಾಯಿ ಚಿಂತಾಜನಕ!

ವೈದ್ಯರ ನಿರ್ಲಕ್ಷ್ಯದಿಂದ ಏಳು ತಿಂಗಳ ಮಗು ಗರ್ಭದಲ್ಲೇ ಸಾವನ್ನಪ್ಪಿದ್ದು, ತಾಯಿಯ ಪರಿಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೀದರ್ ನ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ‌ ನಡೆದಿದೆ.

ಬೀದರ್ : ವೈದ್ಯರ ನಿರ್ಲಕ್ಷ್ಯದಿಂದ ಏಳು ತಿಂಗಳ ಮಗು ಗರ್ಭದಲ್ಲೇ ಸಾವನ್ನಪ್ಪಿದ್ದು, ತಾಯಿಯ ಪರಿಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೀದರ್ ನ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ‌ ನಡೆದಿದೆ.

ಹುಮನಾಬಾದ್ ತಾಲೂಕಿನ ಕನ್ನಕಟ್ಟಾ ಗ್ರಾಮದ ಯಲ್ಲಮ್ಮ ಹಾಗೂ ರಮೇಶ್ ದಂಪತಿಗೆ ಸೇರಿದ ಮಗು ಮೃತಪಟ್ಟಿದ್ದು, ಕನ್ನಕಟ್ಟಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯದಿಂದಾಗಿ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಏಳೂವರೆ ತಿಂಗಳು ಗರ್ಭಿಣಿ ಮಹಿಳೆ ಯಲ್ಲಮ್ಮ ಆರೋಗ್ಯ ತಪಾಸಣೆಗಾಗಿ ಬುಧವಾರ ಕನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾಳೆ. ಈ ವೇಳೆ ಗರ್ಭಿಣಿ ಮಹಿಳೆಯರಿಗೆ ನೀಡಲಾಗುವ ಇಂಜೆಕ್ಷನ್ ಯಲ್ಲಮ್ಮನಿಗೆ ಆಸ್ಪತ್ರೆಯ ನರ್ಸ್ ಕೊಟ್ಟಿದ್ದಾರೆ.

ಹ

ಇಂಜೆಕ್ಷನ್ ಕೊಟ್ಟ ಬಳಿಕ ಯಲ್ಲಮ್ಮನಿಗೆ ಸುಸ್ತು ಕಾಣಿಸಿಕೊಂಡಿದ್ದು, ರಿಯಾಕ್ಷನ್ ಆಗಿ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ತಕ್ಷಣ ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

ಅಷ್ಟರಲ್ಲಾಗಲೇ ಮಗುವಿನ ಕಾಲು ಗರ್ಭಕೋಶದಿಂದ ಹೊರಬಂದು ಸಾವನ್ನಪ್ಪಿರುತ್ತದೆ. ಈ ವಿಷಯ ವೈದ್ಯರಿಗೆ ಗೊತ್ತಿದ್ರೂ ಯಾವುದೇ ಚಿಕಿತ್ಸೆ ನೀಡದೇ ಕಾಲಹರಣ ಮಾಡಿದ್ದಾರೆ. ಬಳಿಕ ಬ್ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಬ್ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದ್ರೂ ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿಲ್ಲಾ. ಇದರಿಂದ ಮಗು ಸಾವನ್ನಪ್ಪುವುದಲ್ಲದೇ ಈಗ ತಾಯಿಯ ಪರಿಸ್ಥಿತಿಯೂ ಚಿಂತಾಜನಕವಾಗಿದೆ‌. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಮಗು ಪಡೆಯಬೇಕೆಂಬ ದಂಪತಿಗಳ ಹತ್ತು ವರ್ಷಗಳ ಕನಸು ಕಮರಿದಂತಾಗಿದೆ.

Ad
Ad
Nk Channel Final 21 09 2023
Ad