Bengaluru 29°C
Ad

ರೈಲಿನಲ್ಲಿ ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆ: ಚಾಕುವಿನಿಂದ ಹಲ್ಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ಸ್ಟೇಷನ್​ನಲ್ಲಿ ರೈಲಿನಲ್ಲಿ  ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆಯಾಗಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ  ನಡೆದಿದೆ.

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ಸ್ಟೇಷನ್​ನಲ್ಲಿ ರೈಲಿನಲ್ಲಿ  ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆಯಾಗಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ  ನಡೆದಿದೆ.

ಗಂಗಾಧರ್ ಹಾಗೂ ಯೋಗೇಶ್​ಗೆ ಹಲ್ಲೆಗೊಳಗಾದವರು. ಇವರನ್ನು ನೆಲಮಂಗಲ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಯಶವಂತಪುರದಿಂದ ಬೆಂಗಳೂರು-ಹಾಸನ ಮಾರ್ಗದ ರೈಲಿನಲ್ಲಿ ಗಂಗಾಧರ್ ಹಾಗೂ ಯೋಗೇಶ್ ಬಂದಿದ್ದರು. ಈ ವೇಳೆ ಪೋನ್​ ಕರೆಗೆ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣಕ್ಕೆ ಕುಳಿತಿದ್ದ ಸೀಟ್ ನೋಡಿಕೊಳ್ಳಲು ಸ್ನೇಹಿತ ಯೋಗೇಶ್​ಗೆ ತಿಳಿಸಿ ಗಂಗಾಧರ್ ಡೋರ್ ಬಳಿ ಹೋಗಿದ್ದಾರೆ.

ರೈಲು ನೆಲಮಂಗಲ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಸೀಟ್​ನಲ್ಲಿ ಕೂರಲು ಯತ್ನಿಸಿದ್ದ. ಈ ಕುರಿತು ಪ್ರಶ್ನೆ ಮಾಡಿದ್ದಕ್ಕೆ ತರಕಾರಿ ಕೊಯ್ಯುವ ಚಾಕುವಿನಿಂದ ಹಲ್ಲೆ ನಡೆಸಿ ರೈಲಿನಿಂದ ಪರಾರಿಯಾಗಿದ್ದಾನೆ.

ಚಾಕು ಇರಿದು ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

Ad
Ad
Nk Channel Final 21 09 2023
Ad