News Karnataka Kannada
Saturday, April 13 2024
Cricket
ಕಾಸರಗೋಡು

ಕಾಸರಗೋಡು: ಶೌಚಾಲಯದ  ಹೊಂಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Kasargod: Man's body found in toilet pit in Kasargod
Photo Credit : News Kannada

ಕಾಸರಗೋಡು: ಕ್ವಾಟರ್ಸ್  ಮಾಲಕ ರೋರ್ವರನ್ನು ಕೊಲೆಗೈದು  ಶೌಚಾಲಯದ  ಹೊಂಡಕ್ಕೆ ತಳ್ಳಿದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿಯಲ್ಲಿ ನಡೆದಿದೆ. ಶನಿವಾರ ಸಂಜೆ ಕೃತ್ಯ ಬೆಳಕಿಗೆ ಬಂದಿದೆ. ಸೀತಾಂಗೋಳಿ ಚೌಕಾರ್ ಪಿಲಿಪಳ್ಳದ ಥೋಮಸ್  ಕ್ರಾಸ್ತ( ೫೨) ಕೊಲೆಗೀಡಾದವರು. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿರುವುದರಿಂದ ಸಂಶಯಗೊಂಡು ಪರಿಸರವಾಸಿಗಳು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಪರಿಸರವಾಸಿಗಳು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂದಿದೆ. ಕೊಲೆ ಬಳಿಕ ಗೋಣಿ ಚೀಲದಲ್ಲಿ ಮೃತದೇಹವನ್ನಿರಿಸಿ  ಶೌಚಾಲಯದ ಹೊಂಡದೊಳಗೆ ತಳ್ಳಿದ್ದು,  ಮೃತದೇಹವನ್ನು ಆದಿತ್ಯವಾರ ಬೆಳಿಗ್ಗೆ ಹೊರ ತೆಗೆದು ಮಹಜರು ನಡೆಸಲಾಗುವುದು ಎಂದು ಬದಿಯಡ್ಕ ಠಾಣಾ ಪೊಲೀಸರು ತಿಳಿಸಿದ್ದಾರೆ.

ಥೋಮಸ್  ನ ಮಾಲಕತ್ವದ  ಕ್ವಾಟರ್ಸ್ ನ  ಸೆಪ್ಟಿಕ್  ಟ್ಯಾ೦ಕ್ ನಲ್ಲಿ  ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದುದರಿಂದ  ಪರಿಸರವಾಸಿಗಳು ಹುಡುಕಾಟ ನಡೆಸಿದಾಗ ಶೌಚಾಲಯದ ಹೊಂಡದ ಸ್ಲಾಬ್ ನ ಒಂದು ಬದಿ ಅರ್ಧ ತೆರೆದ ಸ್ಥಿತಿಯಲ್ಲಿ  ಕಂಡು ಬಂದಿದ್ದು, ದುರ್ವಾಸನೆ ಕಂಡುಬಂದಿತ್ತು. ಇದರಿಂದ ಸಂಶಯಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.  ಕೊಳವೆ ಬಾವಿ ಗುತ್ತಿಗೆ ದಾರರಾಗಿದ್ದ ಥೋಮಸ್ ಕ್ರಾಸ್ತ,  ಬೋರ್ ವೆಲ್ ಕಂಪೆನಿ ಜೊತೆ ಸೇರಿಕೊಂಡು  ಬೋರ್ ವೆಲ್ ನಿರ್ಮಾಣ ನಡೆಸುತ್ತಿದ್ದರು. ಕೃತ್ಯದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು