News Karnataka Kannada
Monday, May 13 2024
ವಿದೇಶ

ಸುಡಾನ್‌ನಲ್ಲಿ ರಾಕೆಟ್‌ ಗುಂಡಿನ ದಾಳಿ: 16 ಮಂದಿ ಸಾವು

rocket
Photo Credit : News Kannada

ಖಾರ್ತೌಮ್: ಡಾರ್ಫರ್ ಪ್ರದೇಶದಲ್ಲಿ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ (ಆರ್‌ಎಸ್‌ಎಫ್) ನಡುವಿನ ರಾಕೆಟ್ ಗುಂಡಿನ ವೇಳೆ 16 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಡಾರ್ಫುರ್ ರಾಜ್ಯದ ರಾಜಧಾನಿ ನ್ಯಾಲಾದಲ್ಲಿ ಈ ಘಟನೆ ನಡೆದಿದೆ.

ಸಾವಿರಾರು ಜನರು ಪಶ್ಚಿಮ ಡಾರ್ಫರ್‌ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ. ನೆರೆಯ ಚಾಡ್‌ ಪ್ರದೇಶದ ಗಡಿಗೆ ಸೇರಲು ಪ್ರಯತ್ನಿಸುತ್ತಿದ್ದಾರೆ. ಈ ನಿರಾಶ್ರಿತರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಜನಾಂಗೀಯತೆ ಕಾರಣಕ್ಕಾಗಿ ಆರ್‌ಎಸ್‌ಎಫ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಮಿಲಿಷಿಯಾಗಳು ನಿರಾಶ್ರಿತರನ್ನು ಗುರಿಯಾಗಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಸುಡಾನ್‌ ಸೇನೆ ಮತ್ತು ಅರೆಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದೆ.

ಇಲ್ಲಿಯವರೆಗೆ ಸುಡಾನ್‌ನಾದ್ಯಂತ ಸುಮಾರು 3,000 ಜನರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಜುಲೈ 8 ರಂದು ನಡೆದಿದ್ದ ಶೆಲ್ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದರು ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು