Bengaluru 28°C
Ad

ಪಾವಗಡದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 3 ಬಲಿ ಪ್ರಕರಣ: ಮೂರು ತಿಂಗಳ ಬಳಿಕ ಸರ್ಕಾರದಿಂದ ಪರಿಹಾರ ಘೋಷಣೆ

ಪಾವಗಡದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಬಳಿಕ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ.

ತುಮಕೂರು: ಪಾವಗಡದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಬಳಿಕ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ.

ತುಮಕೂರು ಜಿಲ್ಲೆ ಪಾವಗಡದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಫೆ. 22 ರಂದು ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಚಿಕಿತ್ಸೆಯಲ್ಲಿ ಅನಿತ, ಅಂಜಲಿ, ನರಸಮ್ಮ ಮೃತಪಟ್ಟಿದ್ದರು. ಮೃತರ ಪ್ರತಿ ಕುಟುಂಬಕ್ಕೆ ತಲಾ 4 ಲಕ್ಷಗಳ ರೂ ಸರ್ಕಾರ ಪರಿಹಾರ ಘೋಷಿಸಿತ್ತು. ಮೃತರ ಮಕ್ಕಳು ಅಪ್ರಾಪ್ತರಾದಲ್ಲಿ, ಮಕ್ಕಳು ಹಾಗೂ ತಂದೆಯ ಹೆಸರಿನಲ್ಲಿ ಜಂಟಿ ಖಾತೆ ತೆರೆದು. ಪರಿಹಾರ ಧನವನ್ನು ಸ್ಥಿರ ಠೇವಣಿ(ಎಫ್.ಡಿ) ರೂಪದಲ್ಲಿ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಇಡಲು ಸೂಚನೆ ನೀಡಿದೆ.

ಖಾತೆಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಮಕ್ಕಳ ಪೋಷಣೆಗೆ ಬಳಸಿಕೊಳ್ಳವಂತೆ‌ ಆದೇಶ ನೀಡಲಾಗಿದೆ. ಮೂವರು ಮಹಿಳೆಯರ ಸಾವು ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದಿತ್ತು. ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಪೋಷಕರು, ಕುಟುಂಬಸ್ಥರು ಹೋರಾಟ ನಡೆಸಿದ್ದರು. ಹಿರಿಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತನಿಖೆ ನಡೆಸಿದ್ದು, ಪ್ರಕರಣ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು.

Ad
Ad
Nk Channel Final 21 09 2023
Ad