Bengaluru 23°C
Ad

ಮಾದಕ ಪದಾರ್ಥ ಮಾರಾಟ : 7.50 ಕೆಜಿ ಒಣ ಗಾಂಜಾ ಮತ್ತು ನಾಲ್ವರು ವಶಕ್ಕೆ

ನಗರದ ಸೊಲ್ಲಾಪುರ ಬ್ರಿಡ್ಜ್ ಬಳಿ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ಬೈಕ್​ಗಳ ಮೇಲೆ ತಂದಿಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ನಾಲ್ವರನ್ನು  ಆದರ್ಶ ನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ: ನಗರದ ಸೊಲ್ಲಾಪುರ ಬ್ರಿಡ್ಜ್ ಬಳಿ ಗಾಂಜಾ ಹಾಗೂ ಮಾದಕ ಪದಾರ್ಥಗಳನ್ನು ಬೈಕ್​ಗಳ ಮೇಲೆ ತಂದಿಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ನಾಲ್ವರನ್ನು  ಆದರ್ಶ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಒಟ್ಟು 7.50 ಕೆಜಿ ಒಣ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ನಗರದ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾಧ್ಯಾಪಕ ಪ್ರಕಾಶ್​ ರಾಠೋಡ್, ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿ ಸಾಯಿಹೇಮಂತ ತಾಟಿ ಇವರಿಗೆ ಸಹಾಯ ಮಾಡಿದ ಅಭಿಮನ್ಯು ಚವ್ಹಾಣ ಹಾಗೂ ಅವಿನಾಶ ಮೇತ್ರಿ ಎಂದು ಗುರುತಿಸಲಾಗಿದೆ.

ಇದರಲ್ಲಿ ಅಭಿಮನ್ಯು ಚವ್ಹಾಣ ಮಧ್ಯಪ್ರದೇಶದ ಮೂಲಕ ಗಾಂಜಾ ತಂದು ಸಹಾಯಕ ಉಪನ್ಯಾಸಕ ಪ್ರಕಾಶ ರಾಠೋಡ್​ಗೆ ನೀಡುತ್ತಿದ್ದ. ಬಳಿಕ ಅದನ್ನು ಸಹಾಯಕ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ ಇತರರು ಕೂಡಿಟ್ಟು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಕಾನೂನು ಬಾಹಿರವಾಗಿ ಗಾಂಜಾ ಸಂಗ್ರಹ ಮಾಡಿಕೊಂಡ ಜಾಲದ ಪೈಕಿ ಖಾಸಗಿ ಕಾಲೇಜುವೊಂದರ ಸಹಾಯಕ ಪ್ರಾದ್ಯಾಪಕ ಹಾಗೂ ಓರ್ವ ವಿದ್ಯಾರ್ಥಿ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು, ಶ್ಲಾಘನೀಯವೆಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂಚನದಿಗಳು ನಾಡು ಎಂದು ಪಂಜಾಬ್​ ಹಾಗೂ ವಿಜಯಪುರವನ್ನು ಕರೆಯಲಾಗುತ್ತಿತ್ತು. ಇದೀಗ ಅದೇ ಉಡ್ತಾ ಪಂಜಾಬ್ ಮಾದರಿಯಲ್ಲೇ ನಮ್ಮ ಜಿಲ್ಲೆಯೂ ಉಡ್ತಾ ವಿಜಯಪುರ ಆಗುತ್ತಿದೆ. ಮಹಾರಾಷ್ಟ್ರದ ಮೂಲಕ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರದ ಮೂಲಕ ನಮ್ಮ ಜಿಲ್ಲೆಗೆ ನಿಷೇಧಿತ ನಶೆಯ ಪದಾರ್ಥಗಳು ಸರಬರಾಜಾಗುತ್ತಿದೆ.

ಜಿಲ್ಲೆಯಲ್ಲಿ ಮೆಡಿಕಲ್ ಹಾಗೂ ಇಂಜಿನೀಯರಿಂಗ್ ಕಾಲೇಜುಗಳಿದ್ದು, ಅನ್ಯ ರಾಜ್ಯದ ಯುವಕರು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು, ಇಲ್ಲಿ ನಶೆಯ ಪದಾರ್ಥಗಳು ಮಾರಾಟ ಆಗುತ್ತಿವೆ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಯುತ್ತಿದ್ದು,

ನಮ್ಮ ಜಿಲ್ಲೆಯ ಸುಶಿಕ್ಷಿತ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಂತಾಗಿದೆ. ಹಾಗಾಗಿ ಅಂತರ್​ ರಾಜ್ಯಗಳ ಬಾರ್ಡರ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಜನರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಈ ಪ್ರಕರಣ ಪೊಲೀಸರು ಬೇಧಿಸಿದ್ದು, ಅಕ್ರಮ ನಿಷೇಧಿತ ಗಾಂಜಾ ಸಾಗಾಟ ಸಂಗ್ರಹ ಹಾಗೂ ಮಾರಾಟದ ವ್ಯವಹಾರದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಾಮೀಲಾಗಿದ್ದು, ಭಯಕ್ಕೆ ಕಾರಣವಾಗಿದೆ.

ಗಾಂಜಾ ಹಾಗೂ ನಿಷೇಧಿತ ನಶೆಯ ಪದಾರ್ಥಗಳ ಕಾರಣದಿಂದ ಕಾನೂನು ಬಾಹಿರ ಕೃತ್ಯಗಳು ಸಹ ನಡೆಯುತ್ತವೆ. ಗಾಂಜಾದ ಗಮ್ಮತ್ತಿನಲ್ಲಿ ಮಾಡಬಾರದ ಕೃತ್ಯಗಳನ್ನು ಮಾಡುವ ಸಾಧ್ಯತೆಯಿದೆ. ಹಾಗಾಗಿ ಒಂದು ಪ್ರಕರಣ ಕಂಡು ಹಿಡಿದು ಸುಮ್ಮನೇ ಕೂಡದೇ ಪೊಲೀಸರು ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳು ಸಹ ಇಂತಹ ಅಕ್ರಮವನ್ನು ತಡೆಯಬೇಕಿದೆ. ಅಕ್ರಮ ಗಾಂಜಾ ಹಾಗೂ ನಶೆಯ ಪದಾರ್ಥಗಳ ವ್ಯವಹಾರ ಮಾಡುವವರು ವಿದ್ಯಾರ್ಥಿಗಳನ್ನೇ ಗುರಿ ಮಾಡಿದ್ದಾರೆ.

Ad
Ad
Nk Channel Final 21 09 2023
Ad