Bengaluru 24°C
Ad

ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದು 101 ಗಣಪತಿ ದೇಗುಲದಲ್ಲಿ ಪೂಜೆ

ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಸ್ನೇಹ ಬಳಗದ ವತಿಯಿಂದ ಜೂ 4ರಂದು ಮಂಗಳವಾರ ಇಡೀ ದೇಶವೇ ಕಾಯುತ್ತಿರುವ ಲೋಕಸಭಾ ಫಲಿತಾಂಶದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿ

ಮೈಸೂರು: ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಸ್ನೇಹ ಬಳಗದ ವತಿಯಿಂದ ಜೂ 4ರಂದು ಮಂಗಳವಾರ ಇಡೀ ದೇಶವೇ ಕಾಯುತ್ತಿರುವ ಲೋಕಸಭಾ ಫಲಿತಾಂಶದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ವಿಘ್ನ ನಿವಾರಕ ವಿಘ್ನೇಶ್ವರನಲ್ಲಿ ಪೂಜೆ ಸಲ್ಲಿಸಿ, ಸಿಎಂ ಸಿದ್ದರಾಮಯ್ಯ ತವರೂರಿನಲ್ಲಿ ಮೈಸೂರು ಕೊಡುಗು ಅಭ್ಯರ್ಥಿ ಎಂ ಲಕ್ಷ್ಮಣ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಸೇರಿದಂತೆ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಲಿದೆ, ಭವಿಷ್ಯದ ಭಾರತಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕ, ಇದು ಸುಳ್ಳು ಮತ್ತು ಸತ್ಯ, ನ್ಯಾಯ ಹಾಗೂ ಅನ್ಯಾಯ ನಡುವಿನ ಧರ್ಮಯುದ್ಧ, ಯಾವತ್ತು ಧರ್ಮಕ್ಕೆ ವಿಜಯ. 2024 ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವ ದಲ್ಲಿ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ನಮ್ಮ ಸಾಧನೆಗೆ ಸಾಕ್ಷಿ, ಒಂದು ಅಭಿವೃದ್ಧಿ ಪರ ಸಾಧನೆ ಹಾಗೂ ಜನಪರ ಗ್ಯಾರಂಟಿಗಳ ಬಲದಿಂದ 20ಕ್ಕೂ ಅಧಿಕ ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲುತ್ತೇವೆ, ಒಂದು ರೀತಿಯಲ್ಲಿ ಬಿಜೆಪಿಯರಿಗೆ ಆಶ್ಚರ್ಯ ಫಲಿತಾಂಶ ನೀಡಲಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಜಿ ರಾಘವೇಂದ್ರ, ಇಂದ್ರ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಚೇಗೌಡನ ಕೊಪ್ಪಲು ರವಿ, ವರುಣ ಮಹಾದೇವ್, ಮಹದೇವ್ ಪಾಂಡೆ, ರವಿಚಂದ್ರ, ಹರೀಶ್ ಕುಮಾರ್, ಮಹಾದೇವ್, ಕಡಕೋಳ ಶಿವಲಿಂಗ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್, ಲೋಕೇಶ್, ನವೀನ್ ಕೆಂಪಿ, ರಾಜೇಶ್ ಪಳನಿ, ಸೇರಿದಂತೆ ಇನ್ನಿತರರು ಇದ್ದರು.

Ad
Ad
Nk Channel Final 21 09 2023
Ad