Bengaluru 26°C
Ad

ʼಬಿಜೆಪಿ ನಾಯಕರು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಇನ್ನು ಮುಂದೆ ನಾವು ಸುಮ್ಮನಿರಲ್ಲʼ

ಬಿಜೆಪಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಡಿಕೆ ಶಿವಕುಮಾರ್, ಬಿಜೆಪಿ ವಿರುದ್ಧ ಬೆಂಕಿಯುಗುಳಿದರು.

ಬೆಂಗಳೂರು: ಬಿಜೆಪಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಡಿಕೆ ಶಿವಕುಮಾರ್, ಬಿಜೆಪಿ ವಿರುದ್ಧ ಕಿಡಿಕಾರಿದರು.

ಇವತ್ತಿನ ವಿಚಾರಣೆಯಲ್ಲಿ ರಾಹುಲ್ ಗಾಂಧಿಯವರು ಸಹ ಹಾಜರಿರಬೇಕಿತ್ತು, ದೆಹಲಿಯಲ್ಲಿ ಇವತ್ತೇ ಇಂಡಿಯ ಮೈತ್ರಿಕೂಟದ ಸಭೆ ಇರುವ ಕಾರಣ ಬರಲಾಗಿಲ್ಲ, ಅವರು ಕಾನೂನನ್ನು ಗೌರವಿಸುವ ವ್ಯಕ್ತಿ, ಮುಂದಿನ ವಿಚಾರಣೆಗೆ ಖಂಡಿತ ಹಾಜರಾಗುತ್ತಾರೆ ಎಂದು ಶಿವಕುಮಾರ್ ಹೇಳಿದರು.

ನಂತರ ಬಿಜೆಪಿ ಮೇಲೆ ನೇರ ಪ್ರಹಾರ ಮಾಡಿದ ಅವರು ನಾವು ಸುಮ್ಮನಿದ್ದರೂ ಬಿಜಪಿ ನಾಯಕರು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಅದರೆ ಇನ್ನು ಮುಂದೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದರು. ಕಾಂಗ್ರೆಸ್ ಯಾವುದನ್ನೂ ಆಧಾರರಹಿತವಾಗಿ ಹೇಳಿಲ್ಲ,

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದನ್ನು ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯವ್ಯಾವ ಹುದ್ದೆಗೆ ಎಷ್ಟೆಷ್ಟು ಲಂಚ ನೀಡಬೇಕಿತ್ತು ಅಂತ ಪತ್ರಿಕೆಗಳಲ್ಲಿ ವರದಿಯಾದ ಅಂಶಗಳ ಆಧಾರದಲ್ಲ್ಲೇ ಕಾಂಗ್ರೆಸ್ ಆಗಿನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮೀಶನ್ ಸರ್ಕಾರ ಅಂತ ಹೇಳಿದ್ದು ಎಂದು ಶಿವಕುಮಾರ್ ಹೇಳಿದರು.

Ad
Ad
Nk Channel Final 21 09 2023
Ad