Bengaluru 28°C
Ad

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 69.50 ರೂ. ಕಡಿತ

ಇಂದಿನಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌  ಬೆಲೆಯನ್ನು 69.50 ರೂ. ಕಡಿತಗೊಳಿಸಿವೆ.

ನವದೆಹಲಿ: ಇಂದಿನಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ  ಗ್ಯಾಸ್ ಸಿಲಿಂಡರ್‌  ಬೆಲೆಯನ್ನು 69.50 ರೂ. ಕಡಿತಗೊಳಿಸಿವೆ.

ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 19 ರೂ. ಇಳಿಕೆಯಾಗಿತ್ತು. ಏಪ್ರಿಲ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆಜಿ ಎಫ್‌ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ 30.50 ರೂ. ಮತ್ತು 7.50 ರೂ. ರಷ್ಟು ಕಡಿತಗೊಳಿಸಲಾಗಿತ್ತು.

ಮುಂಬೈನಲ್ಲಿ ಕೂಡ 69.50 ರೂ. ಇಳಿಕೆಯಾಗಿದ್ದು, ಪರಿಷ್ಕೃತ ಬೆಲೆಯನ್ನು 1,629 ಕ್ಕೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ ಬೆಲೆ 1,841.50 ರಷ್ಟಿದ್ದರೆ, ಕೋಲ್ಕತ್ತಾದಲ್ಲಿ ಬೆಲೆ ಕಡಿತದ ನಂತರ 1,789.50 ರೂ. ಆಗಿದೆ.

ಇದರೊಂದಿಗೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1,676 ರಷ್ಟಿದೆ. ದೇಶಾದ್ಯಂತ ಮೆಟ್ರೋ ನಗರಗಳಿಗೂ ಇದು ಅನ್ವಯವಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ.

Ad
Ad
Nk Channel Final 21 09 2023
Ad