Bengaluru 24°C
Ad

ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಕರಾಗಲಿದ್ದಾರೆ ಅನಿಲ್ ಕಪೂರ್

ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದ್ದು, ಈ ಬಾರಿ ಅನಿಲ್​ ಕಪೂರ್​  ನಡೆಸಿಕೊಡಲಿದ್ದಾರೆ. ಈ ಬಗ್ಗೆ ಜಿಯೋ ಸಿನಿಮಾ ಹೊಸ ಪ್ರೋಮೊ ಹಂಚಿಕೊಂಡಿದೆ.

ಬೆಂಗಳೂರು: ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದ್ದು, ಈ ಬಾರಿ ಅನಿಲ್​ ಕಪೂರ್​  ನಡೆಸಿಕೊಡಲಿದ್ದಾರೆ. ಈ ಬಗ್ಗೆ ಜಿಯೋ ಸಿನಿಮಾ ಹೊಸ ಪ್ರೋಮೊ ಹಂಚಿಕೊಂಡಿದೆ.

“ಬಿಗ್ ಬಾಸ್ OTT ಯ ಹೊಸ ಸೀಸನ್‌ಗೆ ಹೊಸ ಹೋಸ್ಟ್ʼʼಎಂದು ಪ್ರೋಮೊ ಹಂಚಿಕೊಂಡಿದೆ ಜಿಯೋ ಸಿನಿಮಾ. ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್​ ಕಪೂರ್​ ಎಂಬುದು ಖಚಿತವಾಗಿದೆ.

ಆರಂಭದಲ್ಲಿ ಒಟಿಟಿ ಸೀಸನನ್ನು ಕರಣ್ ಜೋಹರ್ ಹೋಸ್ಟ್ ಮಾಡಿದರು, ನಂತರ ಎರಡನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮಾಡಿದರು. ಈಗ  ಅನಿಲ್​ ಕಪೂರ್​  ಮಾಡಲಿದ್ದಾರೆ.

ಅನಿಲ್ ಕಪೂರ್ ಅವರ ಹೋಸ್ಟಿಂಗ್ ಜತೆಗೆ ಈ ಬಾರಿ ಜನಪ್ರಿಯ ತಾರೆಗಳಾದ ಶಿವಂಗಿ ಜೋಶಿ ಮತ್ತು ಶಫಕ್ ನಾಜ್ ಕೂಡ ಇರಲಿದ್ದಾರೆ ಎನ್ನಲಾಗಿದೆ.

ದಲ್ಜಿತ್ ಕೌರ್, ಶೆಹಜಾದಾ ಧಾಮಿ, ಪ್ರತೀಕ್ಷಾ ಹೊನ್ಮುಖೆ ಮತ್ತು ಅರ್ಹಾನ್ ಬೆಹ್ಲ್ ಅವರಂತಹ ಸೆಲೆಬ್ರಿಟಿಗಳು ‘ಬಿಗ್ ಬಾಸ್ OTT 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

Ad
Ad
Nk Channel Final 21 09 2023
Ad