News Karnataka Kannada
Saturday, April 13 2024
Cricket
ಬೆಂಗಳೂರು

ಗೃಹಜ್ಯೋತಿ ಯೋಜನೆ: ಜುಲೈ 27ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

GrihaJyothi Scheme: Applications for GrihaJyoti Scheme can be submitted till July 27.
Photo Credit : News Kannada

ಬೆಂಗಳೂರು: ಗೃಹಜ್ಯೋತಿ ಯೋಜನೆ ಕುರಿತು ಇಂಧನ ಸಚಿವ ಕೆ. ಜೆ. ಜಾರ್ಜ್‌ ಮಾತನಾಡಿದ್ದಾರೆ. ಜು.26, 27ರವರೆಗೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಜುಲೈ ತಿಂಗಳ ಬಿಲ್ ಮುಂದಿನ ತಿಂಗಳ ಮೊದಲ ವಾರ ಬರುತ್ತದೆ. ಇನ್ನೆರಡು ತಿಂಗಳಲ್ಲಿ ಕೆಇಬಿ ಕಚೇರಿಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು. ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರೆಂಟಿಗಳಲ್ಲಿ ಒಂದಾದ “ಗೃಹ ಜ್ಯೋತಿ” ಯೋಜನೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ​​ಕೆ ಜೆ ಜಾರ್ಜ್​​ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದವರಿಗಾಗಿ ಈ ಅದಾಲತ್ ಪ್ರಾರಂಭಿಸುತ್ತೇವೆ. ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದರು.

ಸದನದಲ್ಲಿ ಮಾತನಾಡಿದ ಅವರು ಯಾರೆಲ್ಲಾ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂದ ಬಿಟ್ಟು ಹೋಗಿದ್ದಾರೋ ಅವರಿಗಾಗಿ ಈ ಅದಾಲತ್. ಅದಕ್ಕಾಗಿಯೇ ನಾವು ಈ ಯೋಜನೆಗೆ ಕಟ್ ಆಫ್ ಡೇಟ್ ಇನ್ನೂ ಕೊಡಲಿಲ್ಲ. ಆದಷ್ಟು ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು