Bengaluru 22°C
Ad

ಇನ್‍ಸ್ಟಾಗ್ರಾಮ್‌  ರೀಲ್ಸ್‌ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಹುಡುಗ

ಇನ್‍ಸ್ಟಾಗ್ರಾಮ್‌  ರೀಲ್ಸ್‌ ಮಾಡಲು ಹೋಗಿ ಹುಡುಗನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಾರ್ಖಂಡ್‍ನ ಸಾಹಿಬ್‍ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ರಾಂಚಿ: ಇನ್‍ಸ್ಟಾಗ್ರಾಮ್‌  ರೀಲ್ಸ್‌ ಮಾಡಲು ಹೋಗಿ ಹುಡುಗನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಾರ್ಖಂಡ್‍ನ ಸಾಹಿಬ್‍ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕನನ್ನು ತೌಸಿಫ್ ಎಂದು ಗುರುತಿಸಲಾಗಿದೆ. ಈತ ಗೆಳೆಯನೊಬ್ಬನ ಜೊತೆ ವೀಡಿಯೋ ಮಾಡಲು ಹೇಳಿ 100 ಅಡಿ ಎತ್ತರದಿಂದ ನೀರಿನ ಕ್ವಾರಿಗೆ ಹಾರಿದ್ದಾನೆ. ಹೀಗೆ ಹಾರಿದವನು ಕೆಲ ಹೊತ್ತಿನ ಬಳಿಕ ನಾಪತ್ತೆಯಾಗಿದ್ದಾನೆ. ನಂತರ ತೌಸಿಫ್ ಗೆಳೆಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತೌಸಿಫ್‍ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ ಶವವಾಗಿ ಪತ್ತೆಯಾಗಿದ್ದಾನೆ. ಸದ್ಯ ತೌಸಿಫ್ ನೀರಿಗೆ ಜಿಗಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ರೀಲ್ಸ್ ಗಾಗಿ ಹುಚ್ಚಾಟ ಮೆರೆದಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad