Bengaluru 22°C
Ad

ದೆಹಲಿ: ಗೃಹ ಸಚಿವಾಲಯವನ್ನು ಸ್ಫೋಟಿಸುವುದಾಗಿ ಮೇಲ್ ಬೆದರಿಕೆ

ಸಚಿವ ಅಮಿತ್ ಶಾ ಅವರ ನಿಯಂತ್ರಣದಲ್ಲಿರುವ ಗೃಹ ಸಚಿವಾಲಯವನ್ನು ಸ್ಫೋಟಿಸುವುದಾಗಿ ಮೇಲ್ ಬೆದರಿಕೆ ಬಂದಿದೆ. ಇದು ಕೆಲವು ಕ್ಷಣ ಆತಂಕಕ್ಕೆ ಕಾರಣವಾಯಿತಾದರೂ ಹುಸಿ ಎಂಬುದು ಪೊಲೀಸರು ಸ್ಪಷ್ಟಪಡಿಸಿದರು.

ನವದೆಹಲಿ: ಸಚಿವ ಅಮಿತ್ ಶಾ ಅವರ ನಿಯಂತ್ರಣದಲ್ಲಿರುವ ಗೃಹ ಸಚಿವಾಲಯವನ್ನು ಸ್ಫೋಟಿಸುವುದಾಗಿ ಮೇಲ್ ಬೆದರಿಕೆ ಬಂದಿದೆ. ಇದು ಕೆಲವು ಕ್ಷಣ ಆತಂಕಕ್ಕೆ ಕಾರಣವಾಯಿತಾದರೂ ಹುಸಿ ಎಂಬುದು ಪೊಲೀಸರು ಸ್ಪಷ್ಟಪಡಿಸಿದರು.

ಬೆದರಿಕೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಇರುವ ನಾರ್ತ್ ಬ್ಲಾಕ್​ನ ಕೆಂಪು ಕಲ್ಲಿನ ಕಟ್ಟಡದಲ್ಲಿ ಪೊಲೀಸರು ಸಮಗ್ರ ಶೋಧ ನಡೆಸಿದ್ದಾರೆ. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ತನಿಖಾ ತಂಡವೊಂದರ ಮೂಲಗಳು ತಿಳಿಸಿವೆ.

ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬೆದರಿಕೆ ಮೇಲ್ ಸ್ವೀಕರಿಸಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಂಪೂರ್ಣವಾಗಿ ತನಿಖೆ ನಡೆಸಿ ಹುಸಿ ಬಾಂಬ್​ ಕರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಶೋಧ ಮುಂದವರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad