Bengaluru 29°C
Ad

ಹರಿಹರಪುರದ ಶಾರದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ರಿಷಬ್ ಶೆಟ್ಟಿ ಕುಟುಂಬ

ತುಂಗಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ದೇಗುಲವಾಗಿರುವ ಹರಿಹರಪುರದ ಶಾರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬದ ಜೊತೆ ಭೇಟಿ ನೀಡಿದರು. ಬಳಿಕ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ, ರಿಷಬ್ ಶೆಟ್ಟಿರನ್ನು ನೋಡುತ್ತಿದ್ದಂತೆ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

ಇತ್ತೀಚೆಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಿಷಬ್, ಜನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದರೆಒಳ್ಳೆಯದು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣ ಆರಂಭವಾಗಿದೆ. ಸಿನಿಮಾದ ಕೆಲಸ ಬಹಳ ಚೆನ್ನಾಗಿ ನಡೆಯುತ್ತಿದೆ ಎಂದು ರಿಷಬ್ ಮಾಹಿತಿ ಹಂಚಿಕೊಂಡಿದ್ದರು.

‘ಕಾಂತಾರ’ ಸಕ್ಸಸ್ ನಂತರ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಸಿನಿಮಾಗಾಗಿ ದೊಡ್ಡ ತಂಡ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಹೊಂಬಾಳೆ ಸಂಸ್ಥೆ ಸಿಕ್ಕಿರುವುದು ಫಿಲ್ಮ್ ಮೇಕರ್‌ಗೆ ಒಂದು ಪುಣ್ಯ ಎಂದು ರಿಷಬ್ ಖುಷಿಯಿಂದ ಮಾತನಾಡಿದ್ದಾರೆ.

‘ಕಾಂತಾರ’ಗಾಗಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ ಎಂದು ರಿಷಬ್ ತಿಳಿಸಿದ್ದರು. ಜನ ‘ಕಾಂತಾರ’ ಚಿತ್ರವನ್ನು ಗೆಲ್ಲಿಸಿದ್ದಾರೆ ಬಾಯಲ್ಲಿ ಏನು ಹೇಳಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ನನಗೆ ಯಾವ ಒತ್ತಡವು ಇಲ್ಲ. ಆಗ ನನಗೆ ಬಹಳ ದೊಡ್ಡ ಚಿತ್ರವಾಗಿತ್ತು. ಸಿನಿಮಾ ಯಾವಾಗಲೂ ಕಲಿಯುವ ಪ್ರೊಸೆಸ್ ಅದನ್ನು ಮಾಡುತ್ತಿದ್ದೇನೆ ಎಂದರು.

Ad
Ad
Nk Channel Final 21 09 2023
Ad