Bengaluru 27°C
Ad

ಕುಡುಕನೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ ವಿಧ್ವಂಸಕ ಕೃತ್ಯ: ದೇವಾಲಯದ ಮುಂದೆಯೇ ಮೃತ್ಯು

ಕುಡುಕನೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ  ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೇಯೇ ಬಿದ್ದು ಮೃತಪಟ್ಟಿರುವ ಘಟನೆ ಥಾಯ್ಲೆಂಡ್‌ನ ಚೋನ್‌ಬುರಿ ಪ್ರಾಂತ್ಯದ ಬಾನ್‌ಬಂಗ್ ಜಿಲ್ಲೆಯಲ್ಲಿ ನಡೆದಿದೆ.

ಥಾಯ್ಲೆಂಡ್‌: ಕುಡುಕನೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ  ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೆಯೇ ಬಿದ್ದು ಮೃತಪಟ್ಟಿರುವ ಘಟನೆ ಥಾಯ್ಲೆಂಡ್‌ನ ಚೋನ್‌ಬುರಿ ಪ್ರಾಂತ್ಯದ ಬಾನ್‌ಬಂಗ್ ಜಿಲ್ಲೆಯಲ್ಲಿ ನಡೆದಿದೆ.

ದೇವಾಲಯದ ಒಳಗೆ ಏಕಾಏಕಿ ನುಗ್ಗಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದಂತೆ ಅಲ್ಲಿದ್ದ ಬೌದ್ಧ ಸನ್ಯಾಸಿಗಳು ಆತನನ್ನು ತಡೆಯಲು ಪ್ರಯತ್ನಿಸಿದ್ದರು, ಆದರೆ ಬೌದ್ಧ ಸನ್ಯಾಸಿಗಳ ಮೇಲೂ ಹಲ್ಲೆ ನಡೆಸಿ ದೇವರ ವಿಗ್ರಹವನ್ನು ಕೆಡವಲು ಮುಂದಾದ ವೇಳೆ ಏಕಾಏಕಿ ನೆಲದ ಮೇಲೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾನೆ.

49 ವರ್ಷದ ಥಾಯ್ ಎಂಬ ವ್ಯಕ್ತಿ ದೇವಾಲಯದ ಮುಖ್ಯ ಸಭಾಂಗಣವನ್ನು ಧ್ವಂಸಗೊಳಿಸುತ್ತಿದ್ದಾಗ, ಬುದ್ಧನ ಪ್ರತಿಮೆಯ ತೀಕ್ಷ್ಣವಾದ ಭಾಗವೊಂದು ಅವನ ತಲೆ ಮತ್ತು ಎದೆಗೆ ಚುಚ್ಚಿದೆ.

ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಫೆಬ್ರವರಿ 27ರಂದು ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗಲಭೆ ವೇಳೆ ಸಂಭವಿಸಿದ ಈ ವಿಚಿತ್ರ ಸಾವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಪೊಲೀಸರು ದೇವಸ್ಥಾನದ ಒಳಗೆ ಹೋಗಿ ನೋಡಿದಾಗ ರಕ್ತದಲ್ಲಿ ಮಡುವಿನಲ್ಲಿ ವ್ಯಕ್ತಿಯ ಶವ ಕಂಡು ಬೆಚ್ಚಿಬಿದ್ದಿದ್ದರು. ಆತ ಅತಿ ಎತ್ತರದ ಬುದ್ಧನ ಪ್ರತಿಮೆಯನ್ನು ಏರಿ ಒಡೆಯಲು ಯತ್ನಿಸುತ್ತಿದ್ದಾಗ, ಪ್ರತಿಮೆಯ ಚೂಪಾದ ಭಾಗವೊಂದು ಆತನ ಎದೆಗೆ ಚುಚ್ಚಿಕೊಂಡಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಬಿದ್ದು ಸಾವನ್ನಪ್ಪಿರುವುದು ತನಿಖೆಯಿಂದ ತಿಳಿದುಬಂದಿದೆ.

Ad
Ad
Nk Channel Final 21 09 2023
Ad