News Karnataka Kannada
Tuesday, April 16 2024
Cricket
ದೆಹಲಿ

ವಿಪಕ್ಷಗಳ ಇಂಡಿಯಾ ಹೆಸರಿನ ವಿರುದ್ಧ ದಾಖಲಾಯ್ತು ಮೊದಲ ದೂರು

India
Photo Credit : News Kannada

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇರಿಸಿದ್ದು, ಈ ಹೆಸರಿನ ದುರ್ಬಳಕೆ ಕುರಿತು ದೂರು ದಾಖಲಾಗಿದೆ.

ಇಂಡಿಯಾ (INDIA) ಹೆಸರನ್ನು ಅಸಮರ್ಪಕವಾಗಿ ಬಳಸಿದ ಆರೋಪದ ಮೇಲೆ 26 ವಿರೋಧ ಪಕ್ಷಗಳ ವಿರುದ್ಧ ದೆಹಲಿಯ ಬರಾಖಂಬಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.

ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಮತ್ತು ಗುರುತಿಸುವುದಕ್ಕಾಗಿ ಈ ಹೆಸರನ್ನು ಬಳಸಲಾಗಿದೆ. ಹಾಗಾಗಿ ಮೈತ್ರಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರುದಾರ ಡಾ.ಅವಿನೀಶ್ ಮಿಶ್ರಾ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜಂಟಿ ಸಭೆಯ ನಂತರ 26 ವಿರೋಧ ಪಕ್ಷಗಳು ತಮ್ಮ ಮೈತ್ರಿಗೆ ‘ಇಂಡಿಯಾ’ (Indian National Developmental Inclusive Alliance) ಎಂಬ ಹೆಸರು ಘೋಷಿಸಿತ್ತು. ಮೈತ್ರಿಯ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಅವಿನೀಶ್ ಮಿಶ್ರಾ, ಚುನಾವಣೆಯಲ್ಲಿ ಅನಗತ್ಯವಾಗಿ ‘ಇಂಡಿಯಾ’ ಎಂಬ ಪದವನ್ನು ಬಳಸಲಾಗುತ್ತಿದ್ದು, ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಪಕ್ಷಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 26 ರಾಜಕೀಯ ಪಕ್ಷಗಳು ದೇಶದ ಹೆಸರನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು