Bengaluru 28°C
Ad

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮಸೀದಿಯ ಮೌಲ್ವಿಯನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮೌಲ್ವಿ ಅಬ್ದುಲ್ ರಹೆಮಾನ್ ಎಂದು ಗುರುತಿಸಲಾಗಿದೆ.

ಚಿತ್ರದುರ್ಗ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮಸೀದಿಯ ಮೌಲ್ವಿಯನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಮೌಲ್ವಿ ಅಬ್ದುಲ್ ರಹೆಮಾನ್ ಎಂದು ಗುರುತಿಸಲಾಗಿದೆ.

ಬಾಲಕಿ ಕಳೆದ ಮೂರು ವರ್ಷದಿಂದ ಖುರಾನ್ ಓದಲು ಮಸೀದಿಗೆ ಹೋಗುತ್ತಿದ್ದಳು. ಬಾಲಕಿಗೆ ದೆವ್ವ ಹಿಡಿದಿದೆ, ಮನೆಯಲ್ಲೇ ಪರಿಹಾರ ಪೂಜೆ ಮಾಡಬೇಕು ಎಂದು ಮೌಲ್ವಿ ಹೇಳಿದ್ದನು.

ಮೌಲ್ವಿ 6-7 ತಿಂಗಳುಗಳ ಕಾಲ ವಾರಕೊಮ್ಮೆ ಮನೆಗೆ ಹೋಗಿದ್ದಾನೆ. ಮನೆಗೆ ಹೋದಾಗಲೆಲ್ಲ ಬಾಲಕಿ ಮತ್ತು ಆಕೆಯ ಸಹೋದರನನ್ನು ಕೋಣೆಯೊಳಗೆ ಕರೆದೊಯ್ಯುತ್ತಿದ್ದನು. ಬಾಲಕಿ ತಾಯಿಯನ್ನು ಕೋಣೆಯ ಹೊರಗೆ ಇರುವಂತೆ ಹೇಳುತ್ತಿದ್ದನು. ಬಾಲಕಿ ಸಹೋದರನಿಗೆ “ನಿನ್ನ ಸಹೋದರಿಗೆ ದೆವ್ವ ಮೆಟ್ಟಿದೆ” ಅಂತ ನಂಬಿಸಿದ್ದನು. ದೈಹಿಕ ಸುಖ ಕೊಟ್ಟರೆ ಶಾಂತಿ ಸಿಗುತ್ತದೆ ಎಂದು ಹೇಳಿದ್ದನು.

ಸಹೋದರಿ ಮೇಲೆ ಅತ್ಯಾಚಾರವೆಸಗುವಂತೆ ಸಹೋದರನಿಗೆ ಪ್ರೇರಣೆ ನೀಡುತ್ತಿದ್ದನು. ಮೌಲ್ವಿಯ ಪ್ರೇರಣೆಯಂತೆ ಸಹೋದರ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಹೋದರಿ ಮೇಲೆ ಸಹೋದರ ಅತ್ಯಾಚಾರ ಎಸಗಿರುವುದನ್ನು ಮೌಲ್ವಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ತಾನೂ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ. 6-7 ತಿಂಗಳು ಕಾಲ ಇದೇ ರೀತಿ ನಡೆದಿದೆ.

ಒಂದು ದಿನ ಬಾಲಕಿ ಹೊಟ್ಟೆ ನೋವು ಅಂತ ಒದ್ದಾಡಿದ್ದಾಳೆ. ಕೂಡಲೆ ಪೋಷಕರು ಆಸ್ಪತ್ರೆಗೆ ದಾಖಲಿಸಿದಾಗ ಪ್ರಕರಣ ಬಯಲಾಗಿದೆ.

ಅಬ್ದುಲ್ ರಹೆಮಾನ್ ವಿರುದ್ಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ  ಪ್ರಕರಣ ದಾಖಲಾಗಿದ್ದು, ಆರೋಪಿ ಮೌಲ್ವಿಯನ್ನು ಬಂಧಿಸಲಾಗಿದೆ.

Ad
Ad
Nk Channel Final 21 09 2023
Ad