Bengaluru 24°C
Ad

ನಿರಣಾ ಸರ್ಕಾರಿ ಕಾಲೇಜ್ ನಲ್ಲಿ ವಿಜ್ಞಾನ ವಿಭಾಗ ಆರಂಭ ಯಾವಾಗ..??

ನಿರಣಾ ಸರ್ಕಾರಿ ಕಾಲೇಜ್ ನಲ್ಲಿ ವಿಜ್ಞಾನ ವಿಭಾಗ ಆರಂಭ ಯಾವಾಗ..?? ಬೀದರ್: ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರಣಾ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಲಾ ವಿಭಾಗದಲ್ಲಿ ಪಿಯುಸಿ ಆರಂಭವಾಗಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಬೀದರ್: ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರಣಾ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಲಾ ವಿಭಾಗದಲ್ಲಿ ಪಿಯುಸಿ ಆರಂಭವಾಗಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಆದ್ರೆ ಕಳೆದ ಹಲವು ವರ್ಷಗಳಿಂದ ವಿಜ್ಞಾನ ವಿಭಾಗ ಆರಂಭದ ಬೇಡಿಕೆ ಇದ್ದರು ಇಲ್ಲಿಯವರೆಗೆ ಪ್ರಾರಂಭವಾಗಿಲ್.

ಚಿಟಗುಪ್ಪಾ ಪಟ್ಟಣದ ಸರ್ಕಾರಿ‌ ಕಾಲೇಜ್ ನಲ್ಲಿ ವಿಜ್ಞಾನ ವಿಭಾಗದ ಶಿಕ್ಷಣ ಪಿಯುಸಿಯಲ್ಲಿ‌ ಲಭ್ಯವಿದೆ. ಆದ್ರೆ ಅತ್ಯುತ್ತಮ ಕಟ್ಟಡ ಅತ್ಯುತ್ತಮ ಸೌಲಭ್ಯಗಳು ಹೊಂದಿರುವ ನಿರಣಾ ಸರ್ಕಾರಿ ಪಿಯು ಕಲಾ ಕಾಲೇಜ್ ನಲ್ಲಿ ಎಲ್ಲವು ಇದ್ದರು ಇಲ್ಲಿಯವರೆಗೆ ವಿಜ್ಞಾನ ವಿಭಾಗ ಆರಂಭಕ್ಕೆ ಪದವಿ ಪೂರ್ವ ಶಿಕ್ಷಣ‌ ಇಲಾಖೆ ಆಸಕ್ತಿ ತೋರಿಸಿಲ್ಲ….
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ವಿಜ್ಞಾನ‌ ವಿಭಾಗಕ್ಕೆ ಭಾರಿ‌ ಬೇಡಿಕೆ‌ ಉಂಟಾಗಿದ್ದು ಜಿಲ್ಲೆಯ ಹಲವು ಪ್ರಮುಖ ಕಾಲೇಜ್ ನಲ್ಲಿ ವಿಜ್ಞಾನ ವಿಭಾಗಕ್ಕೆ  ಪ್ರವೇಶ ಬೇಕು ಅಂದ್ರೆ ಲಕ್ಷ ಗಂಟಲೆ‌ ಹಣ ಕೊಡುವ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಡಿಯಲ್ಲಿ ಒಟ್ಟು 24 ಸರ್ಕಾರಿ ಪಿಯು ಕಾಲೇಜ್ ಗಳಿದ್ದು ಅದರಲ್ಲಿ 24 ವಿಭಾಗದ ಕಲಾ ಕಾಲೇಜ್ ಗಳಿವೆ.. 12 ವಿಜ್ಞಾನ ವಿಭಾಗದ ಕಾಲೇಜ್ ಗಳಿವೆ.ಇನ್ನು ವಾಣಿಜ್ಯ ವಿಭಾಗದ
ವಿಜ್ಞಾನ ವಿಭಾಗಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಯಾಕಿಷ್ಟು ನಿರ್ಲಕ್ಷ.?

ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ‌ ಇಲಾಖೆ ವಿಜ್ಞಾನ ವಿಭಾಗದಲ್ಲಿ ಐದರಿಂದ ಆರು ವಿಭಾಗಗಳನ್ನ ಹೆಚ್ಚುವರಿಯಾಗಿ ಅನುಮತಿ ಪಡೆದು ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ‌ ವಿದ್ಯಾರ್ಥಿಗಳನ್ನ ಪ್ರವೇಶ ‌ಪಡೆಯುತ್ತಿದ್ದಾರೆ. ವಸತಿ ಸೇರಿದಂತೆ ಖಾಸಗಿ ವಿಜ್ಞಾನ ಕಾಲೇಜ್ ಗಳು 1.30 ಲಕ್ಷದಿಂದ 1.50 ಲಕ್ಷ ಶುಲ್ಕ ವಸೂಲಿ ಮಾಡುತ್ತಿವೆ.

ಜಿಲ್ಲೆಯಲ್ಲಿ ಪದವಿ ಪೂರ್ವ. ಶಿಕ್ಷಣ ಇಲಾಖೆ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಒತ್ತು ಕೊಡುವ ಅನಿವಾರ್ಯತೆ ಇದೆ..
ಈ ವರ್ಷ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ‌ಕಡೆ ವಿಜ್ಞಾನ ವಿಭಾಗ ಪ್ರಾರಂಭ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಬೇಕಾಗಿದೆ ಅಂತಾರೆ ಹೋರಾಟಗಾರ ರವಿಸ್ವಾಮಿ.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರಣಾ ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜ್ ನಲ್ಲಿ ವಿಜ್ಞಾನ ವಿಭಾಗ ಪ್ರಾರಂಭ ಮಾಡಲು ಅಲ್ಲಿನ ಜನರು ಒತ್ತಾಯ ಮಾಡಿದ್ದಾರೆ.ವಿಶೇಷವಾಗಿ‌ ಮೂಲಭೂತ ಸೌಲಭ್ಯವಿದ್ದರು ವಿಜ್ಞಾನ ವಿಭಾಗ‌ ಆರಂಭಕ್ಕೆ ಯಾಕಿಷ್ಟು ನಿರ್ಲಕ್ಷ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಬೀದರ್ ದಕ್ಷಿಣ ಕ್ಷೇತ್ರದ ಪ್ರಮುಖ ಗ್ರಾಮವಾದ ನಿರಣಾದಲ್ಲಿ ಕೂಡಲೆ ಪಿಯು ವಿಭಾಗದಲ್ಲಿ ವಿಜ್ಞಾನ ಪ್ರಾರಂಭಿಸಲು ಅಲ್ಲಿನ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ….
ಸಧ್ಯಕ್ಕೆ ಈ ಬಗ್ಗೆ ಪದವಿ‌ಪೂರ್ವ ಶಿಕ್ಷಣ‌ ಇಲಾಖೆ ಚಂದ್ರಕಾಂತ ಶಾಹಬಾದಕರ್ ಮುಂದಾಗಬೇಕಾಗಿದೆ.

Ad
Ad
Nk Channel Final 21 09 2023
Ad