Bengaluru 24°C
Ad

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನ 

ಗುತ್ತಿಗೆದಾರನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಬಂಂಧಿಸಿದಂತೆ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಗುತ್ತಿಗೆದಾರನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಬಂಂಧಿಸಿದಂತೆ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆ ಶಾಹೀನ್ ಶೇಖ್ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ಕಸ ವಿಂಗಡಡನೆ ಗುತ್ತಿಗೆದಾರನಾಗಿ ಕೆಲಸ ಮಾಡುತಿದ್ದ.

ಮೇ.17ರ ರಾತ್ರಿ ಶಹೀನ್ ಪತ್ನಿ ಮೀಮ್ ಮಧ್ಯರಾತ್ರಿ 12.30ರ ಸುಮಾರಿಗೆ ಬಾಲಕಿಗೆ ಟೀ ಮಾಡುವಂತೆ ತಿಳಿಸಿ, ಬಾಲಕಿ ಶೆಡ್ ಒಳಗೆ ಹೋದಾಗ ಬಾಗಿಲು ಲಾಕ್ ಮಾಡಿ, ಶಹೀನ್ ಅತ್ಯಾಚಾರವೆಸಗುವಂತೆ ಮಾಡಿದ್ದಳು. ಮರುದಿನ ಪುತ್ರಿ ನಮಗೆ ಈ ಬಗ್ಗೆ ತಿಳಿಸಿದ್ದಳು ಎಂದು ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದರು.

ಪಶ್ಚಿಮ ಬಂಗಾಳದ ನೊಯ್ಡಾ ಜಿಲ್ಲೆಯ ನಿವಾಸಿಯಾದ ಬಾಲಕಿಯ ತಂದೆ ಶಹೀನ್ ಹಾಗೂ ಆತನ ಪತ್ನಿ ಮೀಮ್ ವಿರುದ್ಧ ದೂರು ದಾಖಲಿಸಿದ್ದರು.

ಶಾಹೀನ್ ಹಾಗೂ ಆತನ ಪತ್ನಿಯನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದ್ದು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Ad
Ad
Nk Channel Final 21 09 2023
Ad