Bengaluru 27°C
Ad

ಬಿರುಗಾಳಿ ಸಹಿತ ಮಳೆಗೆ ಜಲಾವೃತಗೊಂಡ ಸಿಲಿಕಾನ್‌ ಸಿಟಿ : ಆರೆಂಜ್ ಅಲರ್ಟ್​ ಘೋಷಣೆ

ಸಂಜೆಯಿಂದ ಸುರಿದ ಜೋರು ಮಳೆಗೆ ಸಿಲಿಕಾನ್​ ಸಿಟಿ ಜನ ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ರಾಜ್ಯ ಹವಾಮಾನ ಇಲಾಖೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಂಗಳೂರು: ಸಂಜೆಯಿಂದ ಸುರಿದ ಜೋರು ಮಳೆಗೆ ಸಿಲಿಕಾನ್​ ಸಿಟಿ ಜನ ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ರಾಜ್ಯ ಹವಾಮಾನ ಇಲಾಖೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಇಂದು ನಗರದಲ್ಲಿ 69 ಮಿಲಿಮೀಟರ್​ ಮಳೆ ಪ್ರಮಾಣ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Ad

ನೈಋತ್ಯ ಮುಂಗಾರು ಪರಿಣಾಮ ಬೆಂಗಳೂರಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಹೆಚ್ಎಎಲ್​​ ಏರ್​​ಪೋರ್ಟ್​ 9.2 ಮಿಲಿಮೀಟರ್​, ಎಲೆಕ್ಟ್ರಾನಿಕ್ ಸಿಟಿ 29 ಮಿ.ಮೀ., ಮಾದಾವರ 4.5 ಮಿ.ಮೀ ಸೋಂಪುರ(ಬೆಂಗಳೂರು ನಗರ) 5.5 ಮಿ.ಮೀ.​ ಮಳೆ ದಾಖಲಾಗಿದೆ ಎಂದು ಬೆಂಗಳೂರಿನ ಮಳೆ ಕುರಿತು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Ad
Ad
Ad
Nk Channel Final 21 09 2023