Bengaluru 22°C
Ad

ಬರ್ತ್‌ ಡೇ ಬ್ಲ್ಯಾಕ್‌ ಪಾರ್ಟಿಯಲ್ಲಿ 27 ಬಾರಿ ಗುಂಡಿನ ದಾಳಿ

ಬರ್ತ್ ಡೇ ಪಾರ್ಟಿಯ ಸಂಭ್ರಮದಲ್ಲಿ ಮುಳುಗಿದ್ದವರ ಮೇಲೆ ಬರೋಬ್ಬರಿ 27 ಬಾರಿ ಗುಂಡಿನ ದಾಳಿ ನಡೆದಿರುವ ಘಟನೆ ಅಮೆರಿಕಾದ ಓಹಿಯೋ ಪ್ರಾಂತ್ಯದ ಅಕ್ರಾನ್‌ನಲ್ಲಿ ನಡೆದಿದೆ.

ಅಮೆರಿಕಾ: ಬರ್ತ್ ಡೇ ಪಾರ್ಟಿಯ ಸಂಭ್ರಮದಲ್ಲಿ ಮುಳುಗಿದ್ದವರ ಮೇಲೆ ಬರೋಬ್ಬರಿ 27 ಬಾರಿ ಗುಂಡಿನ ದಾಳಿ ನಡೆದಿರುವ ಘಟನೆ ಅಮೆರಿಕಾದ ಓಹಿಯೋ ಪ್ರಾಂತ್ಯದ ಅಕ್ರಾನ್‌ನಲ್ಲಿ ನಡೆದಿದೆ.

ಅಕ್ರಾನ್‌ನಲ್ಲಿ ನಡೆಯುತ್ತಿದ್ದ ಬರ್ತ್‌ ಡೇಯ ಬ್ಲ್ಯಾಕ್‌ ಪಾರ್ಟಿಯಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಲಾಗಿದೆ. ಪಾರ್ಟಿಯಲ್ಲಿ ಭಾಗಿಯಾದವರ ಮೇಲೆ ಮನಬಂದಂತೆ ಶೂಟ್ ಮಾಡಿದ್ದು, ಬಹಳ ಉದ್ವಿಗ್ನ ವಾತಾವರಣ ಕಂಡು ಬಂದಿದೆ.

ಈ ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಅಕ್ರಾನ್‌ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬರ್ತ್‌ ಡೇಯಲ್ಲಿ ಭಾಗಿಯಾದ 27 ಜನರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಗಾಯಾಳುಗಳನ್ನ ಹಲವು ಆಸ್ಪತ್ರೆಗಳಿಗೆ ಕೂಡಲೇ ಸಾಗಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಯಾನಕ ಶೂಟೌಟ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬರ್ತ್‌ ಡೇ ಪಾರ್ಟಿ ನಡೆಯುತ್ತಿದ್ದಾಗ ಈ ಸಾಮೂಹಿಕ ಗುಂಡಿನ ದಾಳಿ ನಡೆಸಲಾಗಿದೆ. ಯಾರು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಕ್ರಾನ್‌ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Ad
Ad
Nk Channel Final 21 09 2023
Ad