Bengaluru 28°C
Ad

ಚಿನ್ನದಲ್ಲಿ ಏರಿಕೆ, ಬೆಳ್ಳಿಯಲ್ಲಿ ಇಳಿಕೆ: ಇವತ್ತಿನ ದರಪಟ್ಟಿ ಹೀಗಿದೆ

ಹೆಚ್ಚಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಇಂದು ಕಡಿಮೆಗೊಂಡಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 20 ರೂ ಇಳಿಕೆ ಆಗಿದೆ. ಬೆಳ್ಳಿ ಬೆಲೆ 2.30 ಪೈಸೆಯಷ್ಟು ಕಡಿಮೆ ಆಗಿದೆ.

ಬೆಂಗಳೂರು: ಇಂದು ವಿದೇಶಗಳ ಹಲವೆಡೆ ಚಿನ್ನದ ಬೆಲೆ ತುಸು ಹೆಚ್ಚಾಗಿದೆ. ಭಾರತ ಸೇರಿದಂತೆ ವಿವಿಧೆಡೆ ಬೆಳ್ಳಿ ಬೆಲೆ ತುಸು ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,700 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,760 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,550 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 66,700 ರೂ, ಚೆನ್ನೈ: 67,300 ರೂ, ಮುಂಬೈ: 66,700 ರೂ, ದೆಹಲಿ: 66,850 ರೂ, ಕೋಲ್ಕತಾ: 66,700 ರೂ, ಕೇರಳ: 66,700 ರೂ, ಅಹ್ಮದಾಬಾದ್: 66,750 ರೂ
ಜೈಪುರ್: 66,850 ರೂ, ಲಕ್ನೋ: 66,850 ರೂ, ಭುವನೇಶ್ವರ್: 66,700 ರೂ ಆಗಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,500 ರಿಂಗಿಟ್ (62,030 ರೂಪಾಯಿ ), ದುಬೈ: 2,627.50 ಡಿರಾಮ್ (59,680 ರೂಪಾಯಿ ), ಅಮೆರಿಕ: 715 ಡಾಲರ್ (59,650 ರೂಪಾಯಿ ), ಸಿಂಗಾಪುರ: 988 ಸಿಂಗಾಪುರ್ ಡಾಲರ್ (60,990 ರೂಪಾಯಿ ), ಕತಾರ್: 2,675 ಕತಾರಿ ರಿಯಾಲ್ (61,210 ರೂಪಾಯಿ ), ಸೌದಿ ಅರೇಬಿಯಾ: 2,690 ಸೌದಿ ರಿಯಾಲ್ (59,830 ರೂಪಾಯಿ ), ಓಮನ್: 283.50 ಒಮಾನಿ ರಿಯಾಲ್ (61,420 ರೂಪಾಯಿ ), ಕುವೇತ್: 223.50 ಕುವೇತಿ ದಿನಾರ್ (60,740 ರೂಪಾಯಿ ) ಇದೆ.

ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. 2024ರ ಅಂತ್ಯಕ್ಕೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

Ad
Ad
Nk Channel Final 21 09 2023
Ad