Bengaluru 29°C
Ad

ಸಿರಿಯಾದ ಅಲೆಪ್ಪೊ ಮೇಲೆ ಇಸ್ರೇಲ್ ವಾಯುದಾಳಿ : ಹಲವರ ಸಾವು

Isrel

ಬೇರೂಟ್: ಸಿರಿಯಾದ ಅಲೆಪ್ಪೊ ನಗರದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಹಲವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ  ಮಾಧ್ಯಮವೊಂದು ವರದಿ ಮಾಡಿದೆ. ಆಗ್ನೇಯ ಭಾಗದ ಅಲೆಪ್ಪೊ ನಗರದ ಮೇಲೆ ಈ ದಾಳಿ ನಡೆದಿದೆ ಎಂದಷ್ಟೇ ಹೇಳಿರುವ ಸನಾ ಸುದ್ದಿಸಂಸ್ಥೆ ಮೃತರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

‘ಇಸ್ರೇಲ್ ದಾಳಿಯಲ್ಲಿ ಹಲವರು ಹುತಾತ್ಮರಾಗಿದ್ದು, ಕೆಲ ಸ್ವತ್ತಿನ ನಷ್ಟವಾಗಿದೆ’ಎಂದಷ್ಟೇ ತಿಳಿಸಿದೆ. ಈ ಬಗ್ಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 1948ರಲ್ಲಿ ಇಸ್ರೇಲ್ ದೇಶ ಅಸ್ತಿತ್ವಕ್ಕೆ ಬಂದಾಗಿನಿಂದ ಇಸ್ರೇಲ್ ಮತ್ತು ಸಿರಿಯಾ ನಡುವೆ ಸಂಘರ್ಷವಿದೆ.

ಹಲವು ವರ್ಷಗಳ ಈ ಸಂಘರ್ಷದಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ಅವರನ್ನು ಇರಾನ್ ಬೆಂಬಲಿಸುತ್ತಿದೆ. ಈ ಹಿಂದೆ ಇಸ್ರೇಲ್, ಇರಾನ್ ಅನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಗಾಜಾದಲ್ಲಿ ಹಮಾಸ್ ಬಂಡುಕೋರರ ವಿರುದ್ಧದ ಇಸ್ರೇಲ್ ಹೋರಾಟದ ನಡುವೆಯೇ ಈ ದಾಳಿ ನಡೆದಿದೆ.

Ad
Ad
Nk Channel Final 21 09 2023
Ad