Bengaluru 23°C
Ad

‘ಹೈವೋಲ್ಟೇಜ್ ಪಂದ್ಯಕ್ಕೂ ಮೊದಲೇ ನರ್ವಸ್ ಆಗಿದ್ದೀನಿ’

ವಿಶ್ವ ಕ್ರಿಕೆಟ್​ ಅಭಿಮಾನಿಗಳ ಕಣ್ಣು ಮಾತ್ರ ಭಾರತ- ಪಾಕ್ ನಡುವಿನ ಪಂದ್ಯದ ಮೇಲಿದೆ. ಜೂನ್ 9 ರಂದು ನ್ಯೂಯಾರ್ಕ್​​​ನಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲೇ ಪಾಕ್​ ಕ್ಯಾಪ್ಟನ್​ ಬಾಬರ್ ಅಜಂ ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ವಿಶ್ವ ಕ್ರಿಕೆಟ್​ ಅಭಿಮಾನಿಗಳ ಕಣ್ಣು ಮಾತ್ರ ಭಾರತ- ಪಾಕ್ ನಡುವಿನ ಪಂದ್ಯದ ಮೇಲಿದೆ. ಜೂನ್ 9 ರಂದು ನ್ಯೂಯಾರ್ಕ್​​​ನಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲೇ ಪಾಕ್​ ಕ್ಯಾಪ್ಟನ್​ ಬಾಬರ್ ಅಜಂ ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪಾಡ್​ಕಾಸ್ಟ್​ನಲ್ಲಿ ಮಾತನಾಡಿರುವ ಬಾಬರ್ ಅಜಂ, ಭಾರತ- ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ಇಡೀ T20 ವಿಶ್ವಕಪ್​​ ಟೂರ್ನಿಯಲ್ಲೇ ಹೆಚ್ಚು ಚರ್ಚೆಯಾಗುವ ಮ್ಯಾಚ್ ಆಗಿದೆ.

ವಿಶ್ವದ ಯಾವುದೇ ಮೂಲೆಗೆ ಹೋದರು ಭಾರತ-ಪಾಕ್​ ನಡುವಿನ ಪಂದ್ಯದ ಬಗ್ಗೆ ಮಾತಾನಾಡುತ್ತಾರೆ. ಇಂಥಹ ಮ್ಯಾಚ್​ನಲ್ಲಿ ಆಡಲು ಆಟಗಾರರೆಲ್ಲ ಉತ್ಸಾಹ ಹೊಂದಿದ್ದಾರೆ. ಪ್ರತಿ ಒಬ್ಬರು ತಮ್ಮ ತಮ್ಮ ದೇಶವನ್ನು ಬೆಂಬಲಿಸುವುದರಿಂದ ಎಲ್ಲರ ಕಣ್ಣು ಭಾರತ-ಪಾಕ್ ಮ್ಯಾಚ್​ ಮೇಲಿದೆ. ನಾನು ಕೂಡ ಪಂದ್ಯ ನಡೆಯುವುದಕ್ಕೂ ಇನ್ನು ವಾರ ಇದ್ದರು ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಭಾರತದ ಜೊತೆ ಆಡುವಾಗ ಹೆಚ್ಚು ಹೆಚ್ಚು ಬ್ಯಾಟಿಂಗ್​ ಕಡೆಗೆ ಗಮನ ಕೊಡುತ್ತೇನೆ. 2023ರ ವರ್ಲ್ಡ್​​ಕಪ್​ನಲ್ಲಿ ಗೆಲುವು ಬಹುತೇಕ ನಮ್ಮ ಕಡೆ ಇತ್ತು. ಆದರೆ ವಿರಾಟ್​ ಕೊಹ್ಲಿಯವರು ಉತ್ತಮ ಬ್ಯಾಟಿಂಗ್​​ನಿಂದ ಗೆಲುವನ್ನು ತಮ್ಮದಾಗಿಸಿಕೊಂಡರು. ಇದು ಮತ್ತೆ ಅಮೆರಿಕದಲ್ಲಿ ಮರುಕಳಿಸುವುದಿಲ್ಲ ಎನ್ನುವ ವಿಶ್ವಾಸವಿದೆ.

ಇಡೀ ಕ್ರಿಕೆಟ್ ಅಭಿಮಾನಿಗಳ ನೋಟವೆಲ್ಲ ಭಾರತ-ಪಾಕ್ ಮ್ಯಾಚ್​ ಮೇಲೆ ಇದೆ. ಹೀಗಾಗಿ ನಾನು ನರ್ವಸ್ ಆಗಿದ್ದೇನೆ. ಆದರೆ ಈ ಸಲ ಪಂದ್ಯ ನಮ್ಮಿಂದ ಕೈಜಾರಿ ಹೋಗದಂತೆ ಎಚ್ಚರಿಕೆಯಿಂದ ಆಡುತ್ತೇವೆ. ಇದಕ್ಕಾಗಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪಾಕ್ ತಂಡದ ನಾಯಕ ಬಾಬರ್ ಅಜಂ ಹೇಳಿದ್ದಾರೆ.

Ad
Ad
Nk Channel Final 21 09 2023
Ad