Bengaluru 29°C
Ad

ಪೋರ್ಷೆ ಕಾರು ಆಕ್ಸಿಡೆಂಟ್​​ : ತಪ್ಪು ಒಪ್ಪಿಕೊಂಡ ಬಾಲಕ

ಸ್ಯಾಂಡ್‌ವಿಚ್‌ ಎಂಬ ತಿನಿಸು, ಬೆಳಗ್ಗೆ, ಮಧ್ಯಾಹ್ನ ಸಂಜೆ ರಾತ್ರಿಯೆನ್ನದೆ, ಯಾವುದೇ ಹೊತ್ತಿಗೂ ಹೊಟ್ಟೆ ತುಂಬಿಸಬಲ್ಲ ಒಂದು ಸುಲಭವಾದ ತಿನಿಸು. ಬ್ರೆಡ್‌ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎಂದು ತಿಳಿದಿದ್ದರೂ, ಬಹುತೇಕರ ಮನೆಗಳಲ್ಲಿ ಬ್ರೆಡ್‌ ಬಳಕೆ ಸಾಮಾನ್ಯ.

ಮುಂಬೈ: ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾಗಿದ್ದ ಪುಣೆಯ ಪೋರ್ಷೆ ಕಾರು ಆಕ್ಸಿಡೆಂಟ್​ ಕೇಸ್​ಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮೇ 19 ರಂದು ನಡೆದ ಪೋರ್ಷೆ ಕಾರು ಅಪಘಾತದ ಸಮಯದಲ್ಲಿ ಮದ್ಯಪಾನ ಮಾಡಿರುವುದಾಗಿ ಅಪ್ರಾಪ್ತ ಬಾಲಕ ವೇದಂತ್ ಅಗರ್ವಾಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆಕ್ಸಿಡೆಂಟ್​ ವೇಳೆ ನಡೆದ ಎಲ್ಲ ಘಟನೆಗಳು ಸಂಪೂರ್ಣವಾಗಿ ನೆನಪಿಲ್ಲ. ಆದ್ರೆ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದು ನಾನೇ ಅಂತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ರಕ್ತದ ಮಾದರಿ ಬದಲಿಗೆ ತನ್ನ ರಕ್ತವನ್ನು ಶಿವಾನಿ ಅಗರ್ವಾಲ್ ನೀಡಿದ್ದರು. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಪ್ರಕರಣವು ಇದರಲ್ಲಿ ಸೇರಿದ್ದರಿಂದ ಜೂನ್ 5 ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಕೋರ್ಟ್​ ಒಪ್ಪಿಸಿದೆ. ಬಾಲಕನ ಪೋಷಕರಲ್ಲದೆ, ಆತನ ಅಜ್ಜನನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಮತ್ತು ಓರ್ವ ಉದ್ಯೋಗಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Ad
Ad
Nk Channel Final 21 09 2023
Ad