Bengaluru 26°C
Ad

ಸರಪಂಚ್ ಹತ್ಯೆ ಪ್ರಕರಣ: 16 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರು 

2008ರಲ್ಲಿ ಸರಪಂಚ್ ಒಬ್ಬರನ್ನು ಹತ್ಯೆಗೈದಿದ್ದ ಆರೋಪಿಯನ್ನು 16 ವರ್ಷಗಳ ಬಳಿಕ  ಪೊಲೀಸರು ಬಂಧಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ  ಪೊಲೀಸರು ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಶ್ರೀನಗರ: 2008ರಲ್ಲಿ ಸರಪಂಚ್ ಒಬ್ಬರನ್ನು ಹತ್ಯೆಗೈದಿದ್ದ ಆರೋಪಿಯನ್ನು 16 ವರ್ಷಗಳ ಬಳಿಕ  ಪೊಲೀಸರು ಬಂಧಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ  ಪೊಲೀಸರು ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

Ad

ಬಂಧಿತ ಆರೋಪಿಯನ್ನು ಕೇಶ್ವಾನ್‍ನ ನಿವಾಸಿ ಮೀರ್ ಹುಸೇನ್ ಎಂದು ಗುರುತಿಸಲಾಗಿದೆ.

Ad

ಈತ 16 ವರ್ಷಗಳ ಹಿಂದೆ ನಾಗ್ನಿ ಘಡ್ ಕೇಶ್ವಾನ್ ಪ್ರದೇಶದ ಅಂದಿನ ಸರಪಂಚ್ ಬಶೀರ್ ಅಹ್ಮದ್ ಅವರನ್ನು ಅಪಹರಿಸಿ ಕೊಲೆಗೈದಿದ್ದ. ನಂತರ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ.

Ad

ಆರೋಪಿ ಕಿಶ್ತ್ವಾರ್‌ನಲ್ಲಿ ಅಡಗಿರುವ ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ  ಎಂದು ವರದಿಯಾಗಿದೆ.

Ad

ಅವರ ವಿರುದ್ಧ ರಣಬೀರ್ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Ad
Ad
Ad
Nk Channel Final 21 09 2023