Bengaluru 22°C
Ad

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್‌ ದರ ಹೆಚ್ಚಳ

ಇಂದಿನಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್‌ ದರದ ಶುಲ್ಕವನ್ನು3% ರಿಂದ 5% ರಷ್ಟು ಹೆಚ್ಚಿಸಿದೆ. 

ನವದೆಹಲಿ: ಇಂದಿನಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್‌ ದರದ ಶುಲ್ಕವನ್ನು3% ರಿಂದ 5% ರಷ್ಟು ಹೆಚ್ಚಿಸಿದೆ.

ಸೋಮವಾರದಿಂದ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ ಟೋಲ್‌ ದರ ಏರಿಕೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಸೇರಿದ ಇತರ ಮಾನದಂಡಗಳನ್ನು ಪರಿಗಣಿಸಿ ದರ ಪರಿಷ್ಕರಣೆಯಾಗುತ್ತದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದೆ. ಸೋಮವಾರದಿಂದಲೇ ಜಾರಿಗೆ ಬಂದಿದೆ.   ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಅಡಿಯಲ್ಲಿ ಪ್ರತಿ ವರ್ಷ ಟೋಲ್‌ ದರ ಪರಿಷ್ಕರಣೆಯಾಗುತ್ತಿರುತ್ತದೆ.

ಪ್ರತಿ ವರ್ಷ ಏಪ್ರಿಲ್‌ 1 ರಿಂದ ಈ ದರ ಜಾರಿಗೆ ಬರುತ್ತದೆ. ಆದರೆ ಚುನಾವಣೆ ಇದ್ದ ಕಾರಣ ಬಳಕೆದಾರರ ಶುಲ್ಕವನ್ನು ತಡೆ ಹಿಡಿಯಲಾಗಿತ್ತು. 18ನೇ ಲೋಕಸಭೆಯ ಚುನಾವಣೆ ಮತದಾನ ಮುಗಿದ ಒಂದು ದಿನದ ನಂತರ ಟೋಲ್ ಪ್ಲಾಜಾ ದರಗಳಲ್ಲಿ ಪರಿಷ್ಕರಣೆಯಾಗಿದೆ.

Ad
Ad
Nk Channel Final 21 09 2023
Ad