Bengaluru 24°C
Ad

ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ: ಎರಡನೇ ಸ್ಥಾನದಲ್ಲಿ ಕರ್ನಾಟಕ 

ಭಾರತದಲ್ಲಿ ದಾಖಲೆಯ ನೇರ ತೆರಿಗೆ ಸಂಗ್ರಹವಾದ ಬೆನ್ನಲ್ಲೇ ಈಗ ಇನ್​ಡೈರೆಕ್ಟ್ ಟ್ಯಾಕ್ಸ್ ಆದ ಜಿಎಸ್​ಟಿ ಅಂಕಿ ಅಂಶ ಹೊರಬಂದಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ.

ನವದೆಹಲಿ: ಭಾರತದಲ್ಲಿ ದಾಖಲೆಯ ನೇರ ತೆರಿಗೆ ಸಂಗ್ರಹವಾದ ಬೆನ್ನಲ್ಲೇ ಈಗ ಇನ್​ಡೈರೆಕ್ಟ್ ಟ್ಯಾಕ್ಸ್ ಆದ ಜಿಎಸ್​ಟಿ ಅಂಕಿ ಅಂಶ ಹೊರಬಂದಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ.

ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ವರದಿ ಪ್ರಕಾರ 2024ರ ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ರೂ ಗ್ರಾಸ್ ಜಿಎಸ್​ಟಿ ಆದಾಯ ಸಂಗ್ರಹವಾಗಿದೆ.  ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇ ತಿಂಗಳಲ್ಲಿ 1.44 ಲಕ್ಷ ಕೋಟಿ ರೂ ಆಗಿದೆ.

 2024ರ ಮೇ ತಿಂಗಳ ಜಿಎಸ್​ಟಿ ಸಂಗ್ರಹ: ಸೆಂಟ್ರಲ್ ಜಿಎಸ್​ಟಿ: 32,409 ಕೋಟಿ ರೂ, ರಾಜ್ಯ ಜಿಎಸ್​ಟಿ: 40,265 ಕೋಟಿ ರೂ, ಐಜಿಎಸ್​ಟಿ: 87,781 ಕೋಟಿ ರೂ,ಸೆಸ್: 12,284 ಕೋಟಿ ರೂ.

ಐಜಿಎಸ್​ಟಿ ಎಂಬುದು ಅಂತರರಾಜ್ಯಗಳ ಮಧ್ಯೆ ನಡೆಯುವ ವಹಿವಾಟಿಗೆ ವಿಧಿಸಲಾಗುವ ತೆರಿಗೆಯಾಗಿದೆ. ಈ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗುತ್ತದೆ. 87,781 ಕೋಟಿ ರೂ ಐಜಿಎಸ್​ಟಿ ಪೈಕಿ 38,519 ಕೋಟಿ ರೂ ಕೇಂದ್ರದ ಪಾಲಾಗಿದೆ. 32,733 ಕೋಟಿ ರೂ ಹಣ ರಾಜ್ಯಗಳ ಪಾಲಾಗಿದೆ.

2024ರ ಮೇ ತಿಂಗಳಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹಗೊಂಡ ರಾಜ್ಯಗಳು
ಮಹಾರಾಷ್ಟ್ರ: 26,854 ಕೋಟಿ ರೂ
ಕರ್ನಾಟಕ: 11,889 ಕೋಟಿ ರೂ
ಗುಜರಾತ್: 11,325 ಕೋಟಿ ರೂ
ತಮಿಳುನಾಡು: 9,768 ಕೋಟಿ ರೂ
ಹರ್ಯಾಣ: 9,289 ಕೋಟಿ ರೂ
ಉತ್ತರಪ್ರದೇಶ: 9,091 ಕೋಟಿ ರೂ
ದೆಹಲಿ: 7,512 ಕೋಟಿ ರೂ
ಪಶ್ಚಿಮ ಬಂಗಾಳ: 5,377 ಕೋಟಿ ರೂ
ಒಡಿಶಾ: 5,027 ಕೋಟಿ ರೂ
ತೆಲಂಗಾಣ: 4,986 ಕೋಟಿ ರೂ
ರಾಜಸ್ಥಾನ: 4,414 ಕೋಟಿ ರೂ

ತೆರಿಗೆ ಸಂಗ್ರಹ ಹೆಚ್ಚಳದಲ್ಲಿ ಪಂಜಾಬ್, ದೆಹಲಿ ಮೊದಲಾದ ರಾಜ್ಯಗಳು ಮುಂಚೂಣಿಯಲ್ಲಿವೆ. ಉತ್ತರಪ್ರದೇಶ ಕೂಡ ಸಾಕಷ್ಟು ಹೆಚ್ಚಳ ಕಂಡಿದೆ. ದೇಶದ ಅತಿದೊಡ್ಡ ರಾಜ್ಯದಲ್ಲಿ ಜಿಎಸ್​ಟಿ ಸಂಗ್ರಹ 9,000 ಕೋಟಿ ರೂ ಗಡಿ ದಾಟಿದೆ. ಕಳೆದ ವರ್ಷದಕ್ಕಿಂತ ಶೇ. 22ರಷ್ಟು ತೆರಿಗೆ ಸಂಗ್ರಹ ಹೆಚ್ಚಾಗಿದೆ.

ಮಹಾರಾಷ್ಟ್ರ ಯಥಾಪ್ರಕಾರವಾಗಿ ಟಾಪ್ ರಾಜ್ಯವಾಗಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಗುಜರಾತ್ ಮತ್ತು ಕರ್ನಾಟಕದ ಮಧ್ಯೆ ಅಷ್ಟೇನೂ ವ್ಯತ್ಯಾಸ ಆಗಿಲ್ಲ.

Ad
Ad
Nk Channel Final 21 09 2023
Ad