ಗ್ಯಾಂಗ್ಟಕ್ : ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು ರಾಜ್ಯ ಚುನಾವಣಾ ಆಯೋಗ ಫಲಿತಾಂಶವನ್ನು ಪ್ರಕಟಿಸಿದೆ. ಈ ಸಲ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಕ್ಲಿನ್ ಸ್ವೀಪ್ ಮಾಡುವ ಮೂಲಕ ಎರಡನೇ ಅವಧಿಗೆ ಗದ್ದುಗೆ ಹಿಡಿದಿದೆ. ಎಸ್‌ಡಿಎಫ್ ಪಕ್ಷ ಕೇವಲ ಒಂದು ಸ್ಥಾನ ಪಡೆದಿದೆ. ಇನ್ನೂ ಮತ್ತು ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿವೆ.
ಸಿಕ್ಕಿಂ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್ 19 ರಂದು ಏಕಕಾಲದಲ್ಲಿ ನಡೆದಿತ್ತು. ಲೋಕಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ. 32 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಸಿಕ್ಕಿಂ ರಾಜ್ಯದಲ್ಲಿ ಎಸ್‌ಕೆಎಂ-31 ಹಾಗೂ ಎಸ್‌ಡಿಪಿ-01 ಸ್ಥಾನ ಪಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಖಾತ ತೆರೆದಿಲ್ಲ. ಬಹುಮತಕ್ಕೆ 17 ಸ್ಥಾನಗಳು ಬೇಕಿದ್ದವು.
ಎಸ್‌ಕೆಎಂ ನಾಯಕ ಹಾಗೂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಅಡಿಯಿಟ್ಟಿದೆ. ತಮಾಂಗ್ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಇವರ ಪತ್ನಿ ಕೂಡ ಗೆಲವು ದಾಖಲಿಸಿದ್ದಾರೆ.