Bengaluru 25°C
Ad

ಮದ್ವೆಯಾಗಲು ಭಾರತೀಯ ವರ ಬೇಕು; ಮಾಲ್‌ನಲ್ಲಿ ಪೋಸ್ಟರ್ ಹಿಡಿದ ರಷ್ಯನ್ ಬೆಡಗಿ

Insta

ಯುವಕ-ಯುವತಿಯರು ಮದುವೆಯಾಗಲು ಹುಡುಗ ಬೇಕಾಗಿದ್ದೇವೆ ಹುಡುಗಿ ಬೇಕಾಗಿದ್ದಾಳೆ ಎಂದು ಮ್ಯಾಟ್ರಿಮೋನಿಯಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ.
ಆದರೆ ಇಲ್ಲೊಬ್ಬಳು ರಷ್ಯನ್ ಬೆಡಗಿ, ‘ಭಾರತೀಯ ಗಂಡನನ್ನು ಹುಡುಕುತ್ತಿದ್ದೇನೆ’ ಎಂಬ ಪೋಸ್ಟರ್‌ನ್ನು ಹಿಡಿದಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ.

ಪುರುಷ ಮನುಷ್ಯಾಕೃತಿಯ ಪಕ್ಕದಲ್ಲಿ ಈ ಪೋಸ್ಟರ್ ಹಿಡಿದು ಯುವತಿ ಪೋಸ್ ನೀಡಿದ್ದಾಳೆ. ರಷ್ಯನ್ ಬೆಡಗಿ ದಿನಾರಾ ರವಿಕೆಯಿಲ್ಲದ ಕೆಂಪು ಸೀರೆಯನ್ನು ಧರಿಸಿ ಸುಂದರವಾಗಿ ಕಾಣಿಸಿಕೊಂಡರು.

ಮಾಸ್ಕೋದ ದಿನಾರಾ ಎಂಬ ರಷ್ಯಾದ ಪ್ರಭಾವಿಯೊಬ್ಬರು ಇತ್ತೀಚೆಗೆ ಭಾರತೀಯ ಮಾಲ್‌ನಲ್ಲಿ ಭಾರತೀಯ ವರನನ್ನು ಹುಡುಕುತ್ತಿರುವುದು ತಿಳಿದುಬಂದಿದೆ. ದಿನಾರಾ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಆಕೆ ಎರಡು ಪುರುಷ ಗೊಂಬೆಗಳ ಮಧ್ಯೆ ನಿಂತಿದ್ದಾಳೆ. ಭಾರತೀಯ ಯುವಕನನ್ನು ಮದುವೆಯಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾಳೆ. ತನ್ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ವರನನ್ನು ಹುಡುಕಲು ಸಹಾಯ ಮಾಡುವಂತೆ ಆಕೆ ಕೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ.

https://www.instagram.com/reel/C7lXAS0q8-Q/?utm_source=ig_web_copy_link

Ad
Ad
Nk Channel Final 21 09 2023
Ad