Bengaluru 23°C
Ad

ಲವ್‌ ಮ್ಯಾರೇಜ್‌ ಆದ್ರೂ 2 ವಾರ ಫಸ್ಟ್ ನೈಟ್ ಮುಂದೂಡಿದ ಪತ್ನಿಗೆ ಡಿವೋರ್ಸ್!

Divirc

ಇಂಡೋನೇಷಿಯಾ: ಸೋಶಿಯಲ್ ಮೀಡಿಯಾ ಮೂಲಕ ಪರಿಚಯ, ಗೆಳೆತನ, ಪ್ರೀತಿ ಬಳಿಕ ಮದುವೆ. ಈ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ರೀತಿಯ ಪ್ರೀತಿ ಮದುವೆಯಲ್ಲಿ ಮೋಸ ಹೋದವರ ಸಂಖ್ಯೆ ಹೆಚ್ಚು. ಹೀಗೆ ಫೇಸ್‌ಬುಕ್ ಮೂಲಕ ಪರಿಚಯವಾದ ಪ್ರೀತಿಯಾಗಿ ಮದುವೆ ಹಂತಕ್ಕೆ ತಲುಪಿದೆ.

ಸರಳವಾಗಿ ಮದವೆಯೂ ನಡೆದಿದೆ. ತಾನು ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದ ಹುಡುಗಿ ಎಂದೇ ಹೇಳಿಕೊಂಡು ಬುರ್ಖಾ ಹಾಕಿಕೊಂಡೇ ಮದುವೆ ನಡೆದಿದೆ. ಮದುವೆಯಾದ 12 ದಿನಗಳ ಕಾಲ ಕಾದು ಕಾದು ಸುಸ್ತಾದ ಪತಿ 12ನೇ ದಿನದಂದು ಪತ್ನಿಯ ಅಸಲಿಯತ್ತು ಬಹಿರಂಗಪಡಿಸಲು ಮುಂದಾಗಿದ್ದಾನೆ. ಈ ವೇಳೆ ತನ್ನ ಪತ್ನಿ ಮಹಿಳೆ ಅಲ್ಲ, ಸಾಕ್ಷಾತ್ ಪುರುಷ ಅನ್ನೋದು ಬಹಿರಂಗವಾಗಿದೆ. ಈ ಘಟನೆ ನಡೆದಿರುವುದು ಇಂಡೋನೇಷಿಯಾದಲ್ಲಿ.

ಇಂಡೋನೇಷಿಯಾದ ಎಕೆ ಅನ್ನೋ ವ್ಯಕ್ತಿಗೆ ಫೇಸ್‌ಬುಕ್ ಮೂಲಕ ಅದಿಂದಾ ಕನ್ಜಾ ಪರಿಚಯವಾಗಿದೆ. ಅದಿಂದಾ ಹುಡುಗಿಯ ಫೋಟೋ ಪ್ರೊಫೈಲ್ ಪಿಕ್ ಹಾಕಿದ್ದ. ಈ ಫೋಟೋ ನೋಡಿ ಎಕೆಗೆ ಫುಲ್ ಲವ್ ಆಗಿದೆ. ಪರಿಚಯ ಮಾಡಿಕೊಂಡ ಎಕೆ ಆತ್ಮೀಯನಾಗಿದ್ದಾನೆ. ಅತ್ತ ಅದಿಂದಾ ಕನ್ಜಾ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾನೆ.

ಅದಿಂದಾ ಕನ್ಜಾ ಯುವಕ. ಆದರೆ ಹುಡುಗಿಯ ಧ್ವನಿಯಲ್ಲಿ ಮಮಿಕ್ರಿ ಮಾಡಿ ಮಾತನಾಡುತ್ತಿದ್ದ. ಕೊನೆಗೆ ಎಕೆ ಮದು ಪ್ರಪೋಸ್ ಮುಂದಿಟ್ಟ. ಇದಕ್ಕೂ ಅದಿಂದಾ ಒಕೆ ಎಂದಿದ್ದ. ತಾನು ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದ ಹುಡುಗಿ. ಹೀಗಾಗಿ ಬುರ್ಖಾ ತೆಗೆಯಲ್ಲ ಎಂದಿದ್ದಾನೆ. ಇತ್ತ ಪ್ರೀತಿಯಲ್ಲಿ ಬಿದ್ದ ಎಕೆ ಅದಕ್ಕೂ ಓಕೆ ಅಂದಿದ್ದಾನೆ.

ಇನ್ನು ಮದುವೆಯಾಗಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದ ಎಕೆ ಮೊದಲ ರಾತ್ರಿಗೆ ತಯಾರಿ ಮಾಡಿದ್ದಾನೆ. ಆದರೆ ಪೀರಿಯೆಡ್ಸ್ ಎಂದು ಹೇಳಿ ನಾಲ್ಕೈದು ದಿನ ತಳ್ಳಿದ್ದಾನೆ. ಇತ್ತ 5 ದಿನಗಳ ಬಳಿಕ ತಲೆನೋವು ಎಂದು ಒಂದರೆಡು ದಿನ ತಳ್ಳಿದ್ದಾನೆ. ಹೀಗೆ 12 ದಿನ ತಳ್ಳಿದ್ದಾನೆ. ಈ ವೇಳೆ ಪತಿ ಎಕೆಗೆ ಅನುಮಾನ ಹುಟ್ಟಿದೆ. ಈಕೆ ಒಂದು ಬಾರಿ ನೀಡಿದ್ದ ವಿಳಾಸ ಹಿಡಿದು ತೆರಳಿದ್ದಾನೆ.

ವಿಳಾಸ ಪತ್ತೆ ಹಚ್ಚಿದಾಗ ಅಚ್ಚರಿಯಾಗಿದೆ. ಕಾರಣ ಅದಿಂದಾ ಯುವಕ. ಯುವತಿ ಅಲ್ಲ. ಆದರೆ ಸುಮ್ಮನೆ ಏನೋ ಮಾಡಲು ಹೋಗಿ ಪುರುಷನ ಜೊತೆ ಪ್ರೀತಿಯಲ್ಲಿ ಬಿದ್ದು ಫಜೀತಿ ಅನುಭವಿಸಿದ್ದಾನೆ. ಹೀಗಾಗಿ 12ನೇ ದಿನಕ್ಕೆ ಏಕೆ ಪತ್ನಿ ರೂಪದಲ್ಲಿದ್ದ ಯುವಕನಿಗೆ  ಡಿವೋರ್ಸ್ ನೀಡಿದ್ದಾನೆ.

 

 

Ad
Ad
Nk Channel Final 21 09 2023
Ad