Bengaluru 24°C
Ad

‘ಶೆಫ್​ ಚಿದಂಬರ’ ಸಿನಿಮಾ ಟ್ರೈಲರ್‌ ಅನಾವರಣ ಮಾಡಿ ಹಾರೈಸಿದ ರಮೇಶ್

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ಅನಿರುದ್ಧ್ ​ ಜತ್ಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ “Chef ಚಿದಂಬರ” ಚಿತ್ರದ ಟ್ರೈಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ರಮೇಶ್ ಅರವಿಂದ್ ಟ್ರೈಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ಅನಿರುದ್ಧ್ ​ ಜತ್ಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ “Chef ಚಿದಂಬರ” ಚಿತ್ರದ ಟ್ರೈಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ರಮೇಶ್ ಅರವಿಂದ್ ಟ್ರೈಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಅಲ್ಲದೇ ಅವರು ಟ್ರೇಲರ್​​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಜೂನ್ 14ಕ್ಕೆ ‘ಶೆಫ್​ ಚಿರಂಬರ’ ಸಿನಿಮಾ ಬಿಡುಗಡೆ ಆಗಲಿದೆ. 5 ವರ್ಷಗಳ ಬಳಿಕ ಅನಿರುದ್ದ್ ಅವರು ನಟಿಸಿರುವ ಸಿನಿಮಾ ಎಂಬ ಕಾರಣಕ್ಕೆ ಅವರ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿದೆ.

ಟ್ರೇಲರ್​ ಬಿಡುಗಡೆ ವೇಳೆ ರಮೇಶ್​ ಅರವಿಂದ್​ ಅವರು ವಿಷ್ಣುವರ್ಧನ್ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಬಳಿಕ ಅನಿರುದ್ಧ್​ ಬಗ್ಗೆ ಮಾತನಾಡಿದರು. ‘ನನ್ನ ನಿರ್ದೇಶನದ ‘ರಾಮ ಶ್ಯಾಮ ಭಾಮ’ ಸೇರಿದಂತೆ 2 ಸಿನಿಮಾಗಳಲ್ಲಿ ಅನಿರುದ್ಧ್​ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ಕಲಾವಿದ. ಈ ಸಿನಿಮಾ ಟ್ರೇಲರ್ ಕೂಡ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಶೈಲಿಯ ಈ ಸಿನಿಮಾದ ಟ್ರೇಲರ್ ಕುತೂಹಲ ಮೂಡಿಸಿದೆ. ಸಿನಿಮಾ ನೋಡುವ ಕಾತುರವನ್ನು ಹೆಚ್ಚು ಮಾಡಿದೆ‌. ಚಿತ್ರತಂಡದವರ ಶ್ರಮ ಕಾಣುತ್ತಿದೆ. ಸಿನಿಮಾ ಯಶಸ್ವಿಯಾಗಲಿ’ ಎಂದು ರಮೇಶ್​ ಅರವಿಂದ್​ ಹಾರೈಸಿದರು.

Ad
Ad
Nk Channel Final 21 09 2023
Ad