Bengaluru 23°C
Ad

ಬಾಕ್ಸರ್​ ಅಮಿತ್‌ ಪಂಘಲ್‌ಗೆ ಕೊನೆಗೂ ಒಲಿದ ಒಲಿಂಪಿಕ್ಸ್​ ಟಿಕೆಟ್

2ನೇ ವಿಶ್ವ ಅರ್ಹತಾ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಭಾರತದ ಬಾಕ್ಸರ್ ಅಮಿತ್‌ ಪಂಘಲ್‌ ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ ಗೇಮ್ಸ್​ಗೆ ಅರ್ಹತೆ ಪಡೆದರು.

ಬ್ಯಾಂಕಾಕ್‌:  2ನೇ ವಿಶ್ವ ಅರ್ಹತಾ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಭಾರತದ ಬಾಕ್ಸರ್ ಅಮಿತ್‌ ಪಂಘಲ್‌ ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ ಗೇಮ್ಸ್​ಗೆ ಅರ್ಹತೆ ಪಡೆದರು.

ಭಾನುವಾರ ನಡೆದ ಪುರುಷರ 51 ಕೆ.ಜಿ. ಸ್ಪರ್ಧೆಯಲ್ಲಿ ತಮ್ಮೆಲ್ಲಾ ಅನುಭವ ಬಳಸಿ ಬಾಕ್ಸಿಂಗ್​ ರಿಂಗ್​ಗಿಳಿದ ಅಮಿತ್‌ ಪಂಘಲ್‌ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಸರ್ವಾನುಮತದ ತೀರ್ಪಿನಲ್ಲಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡರು.ಈ ಮೂಲಕ ಭಾರತದಿಂದ 5 ಬಾಕ್ಸರ್​ಗಳು ಒಲಿಂಪಿಕ್ಸ್​ ಕೋಟಾ ಸಂಪಾದಿಸಿದಂತಾಗಿದೆ.

Ad
Ad
Nk Channel Final 21 09 2023
Ad