Bengaluru 22°C
Ad

ಬಿಜೆಪಿಯಿಂದ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ: ರಾಜಗೋಪಾಲ

'ದೇಶದ ಸರ್ವಾಂಗೀಣ ಪ್ರಗತಿಗೆ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿ, ಅಧಿಕಾರಕ್ಕೆ ತರಬೇಕು' ಎಂದು ಬಿಜೆಪಿ ಪಟ್ಟಣ ಘಟಕದ ಮುಖಂಡ ರಾಜಗೋಪಾಲ ಐನಾಪುರ ಹೇಳಿದರು.

ಚಿಟಗುಪ್ಪ: ‘ದೇಶದ ಸರ್ವಾಂಗೀಣ ಪ್ರಗತಿಗೆ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿ, ಅಧಿಕಾರಕ್ಕೆ ತರಬೇಕು’ ಎಂದು ಬಿಜೆಪಿ ಪಟ್ಟಣ ಘಟಕದ ಮುಖಂಡ ರಾಜಗೋಪಾಲ ಐನಾಪುರ ಹೇಳಿದರು.

ಪಟ್ಟಣದ ಹಲವು ಶಾಲಾ ಕಾಲೇಜುಗಳಿಗೆ ಶನಿವಾರ ಪಕ್ಷದ ಮುಖಂಡ ಮಲ್ಲಿಕಾರ್ಜುನ ಪಾಟೀಲ ನೇತೃತ್ವದಲ್ಲಿ ಭೇಟಿ ನೀಡಿ ಈಶಾನ್ಯ ಪದವೀಧರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಮತಯಾಚಿಸಿ ಅವರು ಮಾತನಾಡಿದರು.

ಕೇಂದ್ರದ ಬಿಜೆಪಿ ಸರ್ಕಾರ ದೇಶದ ಇತಿಹಾಸದಲ್ಲಿಯೇ ಹಿಂದೆಂದು ಕಾಣದ ಪ್ರಗತಿಯನ್ನು ತನ್ನ ಆಡಳಿತಾವಧಿಯಲ್ಲಿ ಮಾಡಿದೆ. ಬಡವ-ಶ್ರೀಮಂತ, ದೀನ-ದಲಿತ ಎನ್ನದೆ ಎಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡಿದ್ದಾರೆ. ಹೀಗಾಗಿ ವಿದ್ಯಾವಂತ, ಪ್ರಜ್ಞಾವಂತ ಮತದಾರರು ದೇಶದ ಹಿಂದಿನ ಇಂದಿನ ಪರಿಸ್ಥಿತಿ ಕಂಡು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗೆ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಪ್ರವೀಣ ರಾಜಾಪುರ, ವೀರಣ್ಣ ಜಟ್ಲಾ, ರಾಜಕುಮಾರ ಗುತ್ತೇದಾರ, ಶಾಮರಾವ ಭುತಾಳೆ ಇತರರಿದ್ದರು.

Ad
Ad
Nk Channel Final 21 09 2023
Ad