News Karnataka Kannada
Monday, April 22 2024
Cricket
ಮೈಸೂರು

ಡ್ರೋಣ್ ನಲ್ಲಿ ನ್ಯಾನೊ ಗೊಬ್ಬರ ಸಿಂಪಡಣೆಗೆ ತರಬೇತಿ

Training for nanofertilizer spraying on drone
Photo Credit : By Author

ಮೈಸೂರು: ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಆತ್ಮ ನಿರ್ಭರ ಯೋಜನೆಯಡಿ ಇಫ್ಕೊ ಸಂಸ್ಥೆ ಆವಿಷ್ಕರಿಸಿ, ದೇಶದ ರೈತರಿಗೆ ಪರಿಚಯಿಸಿರುವ ನ್ಯಾನೋ ಗೊಬ್ಬರವನ್ನು ಡ್ರೋಣ್ ಮೂಲಕ ಬಳಕೆ ಮಾಡುವ ಸಂಬಂಧ ರಾಜ್ಯದ ನಿರುದ್ಯೋಗಿ ಯುವಕರಿಗೆ ತರಬೇತಿ ಆರಂಭಿಸಿದೆ.

ದೇಶದ ಅತ್ಯುನ್ನತ ಸಹಕಾರ ಸಂಸ್ಥೆ ಎಂದೇ ಹೆಸರಾದ ಇಫ್ಕೊ ಸಂಸ್ಥೆ ಥ್ಯಾನೋಸ್ ಏರೋಸ್ಪೇಸ್ ಸಹಯೋಗದಲ್ಲಿ ನಿರುದ್ಯೋಗಿ ಯುವಕರಿಗೆ ಸಹಕಾರಿಯಾಗುವ ದೃಷ್ಟಿಯಿಂದ ರಾಜ್ಯದ 50 ಮಂದಿಗೆ ನ್ಯಾನೋ ಗೊಬ್ಬರವನ್ನು ಡ್ರೋಣ್ ಮೂಲಕ ಬೆಳೆಗೆ ಸಿಂಪಡಿಸುವ ವಿಧಾನ ಕುರಿತು ತರಬೇತಿ ಹಮ್ಮಿಕೊಂಡಿದೆ.

ಕೃಷಿಗೆ ರಸಗೊಬ್ಬರ ಬಳಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುವ ಜತೆಗೆ ನೀರಿನ ಮಾಲಿನ್ಯವೂ ಹೆಚ್ಚುತ್ತಿದೆ. ಹಾಗೆಯೇ ಗೊಬ್ಬರಕ್ಕಾಗಿ ವಿದೇಶಗಳನ್ನೇ ಅವಲಂಬಿಸಿರುವುದರಿಂದ ರಸಗೊಬ್ಬರ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಇಫ್ಕೊ ಸಂಸ್ಥೆ 50 ಕೆ.ಜಿ ತೂಕದ ಗೊಬ್ಬರದಷ್ಟೇ ಪರಿಣಾಮಕಾರಿಯಾಗಿರುವ 500 ಮಿ.ಲೀ.ನಷ್ಟು ಲಿಕ್ವಿಡ್‌ನಂತಿರುವ ನ್ಯಾನೋ ಗೊಬ್ಬರವನ್ನು ಆವಿಷ್ಕರಿಸಿದೆ. ಟಾನಿಕ್ ರೂಪದಲ್ಲಿರುವ ಈ ಗೊಬ್ಬರವನ್ನು ಬೆಳೆಗೆ ಸಿಂಪಡಣೆ ಮಾಡಬೇಕಿದೆ.

ಸಾಮಾನ್ಯವಾಗಿ ಗೊಬ್ಬರ ಸಿಂಪಡಣೆಗೆ ಸಮಯ ಮತ್ತು ಕಾರ್ಮಿಕರ ಅಗತ್ಯವಿದೆ. ಇದರಿಂದ ಹೆಚ್ಚಿನ ಹಣವೂ ವೆಚ್ಚವಾಗಲಿದೆ. ಇದರ ಬದಲಿಗೆ ಡ್ರೋಣ್ ಮೂಲಕ ಗೊಬ್ಬರ ಸಿಂಪಡೆಣೆ ಮಾಡಿದರೆ ಹಣ ಮತ್ತು ಸಮಯ ಉಳಿತಾಯವಾಗಲಿದೆ. ಡ್ರೋಣ್‌ನಲ್ಲಿ 1 ಎಕರೆಗೆ ಗೊಬ್ಬರ ಸಿಂಪಡಣೆ ಮಾಡಲು 5ರಿಂದ 10 ನಿಮಿಷ ಬೇಕಾದರೆ, ಮಾನವನಿಂದ 30 ನಿಮಿಷ ಅಗತ್ಯವಿದೆ. ಜತೆಗೆ ಒಂದು ಚೀಲ ಯೂರಿಯಕ್ಕೆ 2668 ರೂ. ಇದ್ದರೆ, ಅದೇ ನ್ಯಾನೋ ಯೂರಿಯಕ್ಕೆ 225 ರೂ. ಇರಲಿದೆ. ಇದರಿಂದ ರೈತರಿಗೆ ಹಣ ಉಳಿತಾಯವಾಗುವ ಜತೆಗೆ ಸಮಯ ಮತ್ತು ಸಾಗಾಟ ವೆಚ್ಚ ತಗ್ಗಲಿದೆ.

ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಗ್ರಾಮೀಣ ಭಾಗದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದರಂತೆ ಡ್ರೋಣ್ ನೀಡಲು ಇಫ್ಕೊ ಚಿಂತನೆ ನಡೆಸಿದ್ದು, ಅದಕ್ಕಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲು ಸಿದ್ಧತೆ ನಡೆಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು