News Karnataka Kannada
Sunday, April 14 2024
Cricket
ಮಂಡ್ಯ

ರಾಜಸ್ಥಾನದ ದರ್ಗಾದಲ್ಲಿ ಹರಕೆ ತೀರಿಸಿದ ಜೆಡಿಎಸ್ ಮುಖಂಡರು

JD(S) leaders offer prayers at dargah in Rajasthan
Photo Credit : By Author

ಕೆ.ಆರ್.ಪೇಟೆ: ತಾಲೂಕಿನಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಹೆಚ್.ಟಿ.ಮಂಜು ಅವರು ಗೆದ್ದು ಶಾಸಕರಾದ ಹಿನ್ನಲೆಯಲ್ಲಿ ಪಕ್ಷದ ಮುಖಂಡರಾದ ಸೈಯದ್ ರೋಶನ್, ಸೈಯದ್ ಬರ್ಕತ್, ಶಶಿ ಕುಮಾರ್ ಮತ್ತು ತನ್ವೀರ್ ಪಾಷಾ ಅವರು ರಾಜಸ್ಥಾನದಲ್ಲಿರುವ ಅಜ್ಮೀರ್ ದರ್ಗಾಕ್ಕೆ ತೆರಳಿ ಹರಕೆ ತೀರಿಸಿದ್ದಾರೆ.

ಇವರು ತಾಲೂಕಿನ ಶಾಸಕರಾಗಿ ಹೆಚ್.ಟಿ.ಮಂಜು ರವರು ಬಹುಮತದಲ್ಲಿ ಆಯ್ಕೆಯಾದರೆ ತಮ್ಮ ಧರ್ಮದ ಪ್ರಸಿದ್ಧ ದೇವಾಲಯ ಅಜ್ಮೀರ್ ದರ್ಗಾಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದರು. ಅದರಂತೆ ರಾಜಸ್ಥಾನದಲ್ಲಿರುವ ಅಜ್ಮೀರ್ ದರ್ಗಾಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದ್ದಾರೆ.

ಈ ವೇಳೆ ಮಾತನಾಡಿದ ಸೈಯದ್ ರೋಷನ್ ನಮ್ಮ ನಾಯಕರಾದ ಶಾಸಕ ಹೆಚ್.ಟಿ.ಮಂಜು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರೆ ಈ ದೇವಾಲಯಕ್ಕೆ ಬಂದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಹರಕೆ ಹೊತ್ತಿದ್ದೆವು. ಅದರಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿ ಬಹು ಅಂತರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಅವರಿಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು