Bengaluru 25°C
Ad

ರಾಹುಲ್​​​ ಗಾಂಧಿ ಪ್ರಧಾನಿಯಾಗುವರೆಗೆ ಇಲ್ಲಿ ಸಾಲ ನೀಡುವುದಿಲ್ಲ: ವಿಡಿಯೋ ವೈರಲ್‌

Rahulgandi

ವೈರಲ್: ಸಾಲ ಕೇಳುವವರ ಕಾಟದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಬುದ್ಧಿವಂತ ವ್ಯಾಪಾರಿಗಳು ಇಲ್ಲಿ ಸಾಲ ಕೊಡಲಾಗುವುದಿಲ್ಲ, ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ದೇವರಿದ್ದಂತೆ ದೇವರಿಗೆ ಸಾಲ ಕೊಡುವಷ್ಟು ನಾನು ದೊಡ್ಡವನಲ್ಲ ಎಂಬಿತ್ಯಾದಿ ಬೋರ್ಡ್ ಗಳನ್ನು ಅಂಗಡಿಯ ಮುಂದೆ ಹಾಕಿಕೊಳ್ಳುತ್ತಾರೆ.

ಆದರೆ ಇಲ್ಲೊಬ್ಬರು ಬೀದಿ ಬದಿ ವ್ಯಾಪಾರಿ ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ಕೊಡಲಾಗುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಕವಿಶ್ ಅಝೀಝ್ (@azzizkavish) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಅಂಗಡಿಯಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವವರೆಗೆ ಸಾಲ ಮಾಡುವುದನ್ನು ನಿಷೇಧಿಸಲಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಆರು ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯ ಮುಂದೆ ʼಸಾಲ ಕೇಳುವಂತಿಲ್ಲ; ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುವವರೆ ಇಲ್ಲಿ ಸಾಲವನ್ನು ನೀಡಲಾಗುವುದಿಲ್ಲʼ ಎಂಬ ಬರಹವನ್ನು ಬರೆದಿರುವ ಬೋರ್ಡ್ ಒಂದನ್ನು ನೇತು ಹಾಕಿರುವ ದೃಶ್ಯವನ್ನು ಕಾಣಬಹುದು.

ಇದಕ್ಕೆ ನಾನಾ ಕಾಮೆಂಟ್‌ ಗಳು ಬರ್ತಿವೆ. ಬಳಕೆದಾರರು ʼಇಲ್ಲಿ ಸಾಲವನ್ನು ಪಡೆಯುವ ಭರವಸೆ ಬಿಟ್ಟು ಬಿಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಸಾಲ ಕೇಳಲು ಬರುವ ಗ್ರಾಹಕರಿಂದ ಹಿಂಗೂ ತಪ್ಪಿಸಿಕೊಳ್ಳಬಹುದಾ ಎಂದು ಈ ವ್ಯಾಪಾರಿಯ ಹೊಸ ಐಡಿಯಾವನ್ನು ಕಂಡು ಶಾಕ್ ಆಗಿದ್ದಾರೆ.

Ad
Ad
Nk Channel Final 21 09 2023
Ad