Bengaluru 27°C
Ad

ಶಾಸಕ ಹರೀಶ್ ಪೂಂಜಾ ಮನೆಗೆ ಬಂದ ಪೊಲೀಸ್ ಆನಂದ್; ಮನೆಯಿಂದ ಹೊರಗೆ ಹೋಗು ಅಂದ ಪೂಂಜಾ

Harish (3)

ಮಂಗಳೂರು: ‘ಪೊಲೀಸ್ ಠಾಣೆ’ ಏನು ನಿಮ್ಮಪ್ಪಂದಾ? ಅನ್ನೊ ಶಾಸಕ ಹರೀಶ್ ಪೂಂಜಾ ಹೇಳಿಕೆ ವಿಚಾರ ಸದ್ಯ ರಾಜ್ಯದಲ್ಲಿ ಗದ್ದಲ ಎಬ್ಬಿಸಿದೆ. ಈ ಹೇಳಿಕೆಯ ವಿಡಿಯೋ ಅನ್ನು ಬೆಳ್ತಂಗಡಿ ಪೊಲೀಸ್ ಆನಂದ್ ಎಂಬುವವರು ಸ್ಟೇಟಸ್ ಹಾಕಿದ್ದರು. ಇಂದು ಹರೀಶ್ ಪೂಂಜಾ ಮನೆಗೆ ಅದೇ ಪೊಲೀಸ್ ಆನಂದ್ ಬಂದಿದ್ದಾರೆ.

ಈ ವಿಚಾರ ತಿಳಿದು ತಕ್ಷಣ ಹೊರ ಬಂದ ಹರೀಶ್ ಪೂಂಜಾ ಪೊಲೀಸ್ ಆನಂದ್ ಗೆ ಮನೆಯಿಂದ ಹೊರಗೆ ಹೋಗು ಎಂದಿದ್ದಾರೆ. ಇವನನ್ನ ಹೊರಗೆ ಕಳುಹಿಸಿ ಜನ ಇದಾರೆ ಗಲಾಟೆ ಮಾಡ್ತಾರೆ ಅಂತಾ ಅಧಿಕಾರಿಗಳಿಗೆ ಪೂಂಜಾ ಹೇಳಿದ್ದಾರೆ.

ಬಳಿಕ ಸೆಕ್ಯುರಿಟಿ ಕೊಟ್ಟು ಅಲ್ಲಿಂದ ಆನಂದ್ ನನ್ನು ಪೊಲೀಸರು ಕರೆದುಕೊಂಡು ಹೋದರು.

ಅಕ್ರಮ ಕಲ್ಲು ಗಣಿಕಾರಿಕೆ ಹಿನ್ನೆಲೆಯಲ್ಲಿ ಬಂಧಿತರಾಗಿದ್ದರೆನ್ನಲಾದ ಬಿಜೆಪಿ ಬೆಳ್ತಂಗಡಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜಾ ತಮ್ಮ ಬೆಂಬಲಿಗರೊಂದಿಗೆ ಶನಿವಾರ ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಠಾಣೆಯಲ್ಲೇ ಪಿಎಸ್ಐಗೆ ಪೊಲೀಸ್ ಠಾಣೆ ಏನು ನಿಮ್ಮಪ್ಪಂದಾ ಅಂತ ಧಮ್ಕಿ ಕೂಡ ಹಾಕಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

 

Ad
Ad
Nk Channel Final 21 09 2023
Ad