Bengaluru 24°C
Ad

ರೋಚಕ ಪಂದ್ಯದಲ್ಲೇ ಆರ್​​ಸಿಬಿಗೆ ಸರಿಯಾಗಿ ಕೈಕೊಟ್ಟ ಕೊಹ್ಲಿ!

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು, ರಾಜಸ್ಥಾನ್​​ ರಾಯಲ್ಸ್​ ಮುಖಾಮುಖಿ ಆಗಿದೆ.

ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​​​ ಬೌಲಿಂಗ್​​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ನಾಯಕತ್ವದ ಆರ್​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.

ಆರ್​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಕೇವಲ 14 ಬಾಲ್​ನಲ್ಲಿ 17 ರನ್​ ಗಳಿಸಿ ಔಟಾಗಿದ್ದಾರೆ. ಈ ಪೈಕಿ 1 ಸಿಕ್ಸರ್​​, 2 ಫೋರ್​ ಗಳಿಸಿದ್ದರು. ಬೌಂಡರಿ ಬಾರಿಸಲು ಹೋಗಿ ಟ್ರೆಂಟ್​​ ಬೌಲ್ಟ್​ ಓವರ್​ನಲ್ಲಿ ಕ್ಯಾಚ್​ ನೀಡಿದರು.

ಇವರ ಬಳಿಕ ಜವಾಬ್ದಾರಿಯುತವಾಗಿ ಬ್ಯಾಟ್​ ಬೀಸಿದ್ದ ವಿರಾಟ್​ ಕೊಹ್ಲಿ 24 ಬಾಲ್​ನಲ್ಲಿ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ದರು. ಚಹಾಲ್​ ಬೌಲಿಂಗ್​ನಲ್ಲಿ ಸಿಕ್ಸ್​ ಬಾರಿಸಲು ಹೋಗಿ ಕ್ಯಾಚ್​ ಕೊಟ್ಟರು. ಈ ಪೈಕಿ ಕೊಹ್ಲಿ 1 ಸಿಕ್ಸರ್​​, 3 ಫೋರ್​​ ಬಾರಿಸಿದರು. ಆರ್​​ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ.

Ad
Ad
Nk Channel Final 21 09 2023
Ad