Bengaluru 23°C
Ad

ಭಾರತ ಬಿಟ್ಟು ಹೋಗುವಂತೆ ಆಲಿಯಾಗೆ ಫ್ಯಾನ್ಸ್‌ ಛೀಮಾರಿ

ನಟಿ ಅಲಿಯಾ ಭಟ್‌ ಮಿಲ್ಕಿವೇ ಎಂದೇ ಪ್ರಸಿದ್ದ. ಇವರ ನಟನೆಗೆ ಫ್ಯಾನ್ಸ್‌ ಬಳಗವನ್ನು ಹೊಂದಿದ್ದಾರೆ.ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಬರೋಬ್ಬರಿ 8.45 ಕೋಟಿ ಹಿಂಬಾಲಕರು ಇದ್ದಾರೆ.

ನಟಿ ಆಲಿಯಾ ಭಟ್‌ ಮಿಲ್ಕಿವೇ ಎಂದೇ ಪ್ರಸಿದ್ದ. ಇವರ ನಟನೆಗೆ ಫ್ಯಾನ್ಸ್‌ ಬಳಗವನ್ನು ಹೊಂದಿದ್ದಾರೆ.ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಬರೋಬ್ಬರಿ 8.45 ಕೋಟಿ ಹಿಂಬಾಲಕರು ಇದ್ದಾರೆ. ಆದರೆ ಅವರು ಭಾರತದಲ್ಲಿ ಇದುವರೆಗೂ ಮತ ಹಾಕಿಲ್ಲ ಈ ವಿಚಾರವಾಗಿ ಭಾರಿ ಚರ್ಚೆ ನಡೆದಿದ್ದು ಕೆಲ ನೆಟ್ಟಿಗರು ಅವರನ್ನು ಭಾರತ ಬಿಟ್ಟು ಹೋಗುವಂತೆ ಆಗ್ರಹಿಸಿದ್ದಾರೆ ಹಾಗಾದ್ರೆ ಇದುವೆರೆಗೂ ಯಾಕೆ ಮತ ಹಾಕಿಲ್ಲ ಅಂತೀರ ಅಸಲಿಗೆ ಆಲಿಯಾ ಭಾರತೀಯ ಪ್ರಜೆ ಅಲ್ಲ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ. ಹೀಗಾಗಿ, ಅವರಿಗೆ ವೋಟ್ ಮಾಡೋ ಹಕ್ಕು ಇಲ್ಲ. ಆಲಿಯಾ ಭಾರತೀಯ ನಾಗರಿಕತ್ವ ಪಡೆದುಕೊಳ್ಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ (ಮೇ 20) ಅಮಿತಾಭ್ ಬಚ್ಚನ್, ಹೃತಿಕ್ ರೋಷನ್, ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮೊದಲಾದವರು ವೋಟ್ ಮಾಡಿದ್ದಾರೆ. ರಣಬೀರ್ ಕಪೂರ್ ಕೂಡ ಮತ ಚಲಾಯಿಸಿದ್ದಾರೆ. ಆದರೆ, ರಣಬೀರ್ ಪತ್ನಿ ಆಲಿಯಾ ಆಗಮಿಸಿಲ್ಲ. ಇದಕ್ಕೆ ಕಾರಣ ಅವರು ಭಾರತೀಯ ನಾಗರಿಕತ್ವ ಹೊಂದಿರದೇ ಇರುವುದು. ಇದನ್ನು ಅನೇಕರು ಟೀಕಿಸುತ್ತಿದ್ದಾರೆ.

Ad
Ad
Nk Channel Final 21 09 2023
Ad